ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಸ್ತೆ ನಿಯಮಗಳ ಕುರಿತು ಎಲ್‌ಇಡಿ ಪರದೆಗಳ ಮೂಲಕ ಜಾಗೃತಿ

ಧಾರವಾಡ: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಕಮಿಷನರೇಟ್ ವತಿಯಿಂದ ವಾಹನ ಸವಾರರಲ್ಲಿ ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಎಲ್‌ಇಡಿ ಪರದೆ ಹೊಂದಿದ ಕ್ಯಾಂಟರ್ ವಾಹನಗಳನ್ನು ಅಲ್ಲಲ್ಲಿ ಕಳುಹಿಸಿ ಆ ಎಲ್‌ಇಡಿ ಪರದೆಗಳ ಮುಖಾಂತರ ರಸ್ತೆ ಸುರಕ್ಷತೆ ಮತ್ತು ವಾಹನ ಸವಾರರು ಅನುಸರಿಸಬೇಕಾದ ನಿಯಮಗಳ ಕುರಿತು ಕಿರುಚಿತ್ರ ಮತ್ತು ನಿಯಮಗಳನ್ನು ಬಿತ್ತರಿಸುವ ಜಾಥಾ ಹಮ್ಮಿಕೊಳ್ಳಲಾಗಿದೆ.

ಈ ಜಾಥಾಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹಸಿರು ಬಾವುಟ ತೋರಿಸುವ ಮುಖಾಂತರ ಚಾಲನೆ ನೀಡಿದರು. ಈ ಜಾಥಾ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಸಂಚರಿಸಲಿದೆ. ರಸ್ತೆ ಸಂಚಾರ, ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ಇತ್ಯಾದಿ ನಿಯಮಗಳ ಕುರಿತು ಎಲ್‌ಇಡಿ ಪರದೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

Edited By : Shivu K
Kshetra Samachara

Kshetra Samachara

03/12/2024 02:16 pm

Cinque Terre

12.14 K

Cinque Terre

0

ಸಂಬಂಧಿತ ಸುದ್ದಿ