ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪರವಾಗಿ ಸಿದ್ದರಾಮಯ್ಯ ಅಪ್ತ ಸಚಿವರು, ಶಾಸಕರು ಹಾಗೂ ಶೋಷಿತ ಸಮುದಾಯಗಳ ಒಕ್ಕೂಟ ಹಾಸನದಲ್ಲಿ ಡಿಸೆಂಬರ್ 5 ರಂದು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ಮುಡಾ ಹಗರಣ ಆರೋಪಕ್ಕೆ ಉತ್ತರ ಕೊಡಲು ಸಿಎಂ ಸಿದ್ದರಾಮಯ್ಯ ಪರವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಆದ್ರೆ ಸಿದ್ದರಾಮಯ್ಯ ಬಲ ಪ್ರದರ್ಶನದ ಸಮಾವೇಶಕ್ಕೆ ಪಕ್ಷದಲ್ಲಿ ಅಸಮಧಾನ ವ್ಯಕ್ತವಾಯ್ತ ಎಂಬ ಪ್ರಶ್ನೆ ಎದುರಾಗಿದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಸಮಾವೇಶದ ವಿರುದ್ಧ ಪತ್ರದ ಮೂಲಕ ದೂರು ನೀಡಿದ್ದಾರೆ. ಪತ್ರದಲ್ಲಿ ಸಮಾವೇಶದ ವಿರುದ್ಧ ಉಲ್ಲೇಖಿಸಿರುವ ಅವರು, ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಹಾಗು ಸಚಿವರಿಂದ ಡಿಸೆಂಬರ್ 5 ರಂದು ಸ್ವಾಭಿಮಾನ ಸಮಾವೇಶ ಮಾಡ್ತಿದ್ದಾರೆ, ಅವರು ಪಕ್ಷದ ಚಿಹ್ನೆಯಡಿ ಸಮಾವೇಶ ಮಾಡುತ್ತಿಲ್ಲ ವೈಯಕ್ತಿಕ ಲಾಭಕ್ಕಾಗಿಸಮಾವೇಶ ಮಾಡುತ್ತಿದ್ದಾರೆ ಈ ಬಗ್ಗೆ ತಿಳಿಹೇಳಬೇಕು ಎಂದು ದೂರು ನೀಡಲಾಗಿದೆ.
ಪಕ್ಣದ ಕಚೇರಿಯಲ್ಲಿ ಸಭೆ ನಡೆಸಿ ಸಮಾವೇಶದ ಪೂರ್ವತಯಾರಿ ಮಾಡುತ್ತಾರೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದ್ರ ನಡುವೆ ಹೈಕಮಾಂಡ್ ಗೆ ದೂರು ನೀಡಿದ ಮುಖಂಡ ಯಾರು ಅನ್ನೋದು ಸಧ್ಯ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ವಿರೋಧಿ ಬಣ ಹೀಗೆ ಪತ್ರ ಬರೆದಿರಬಹುದು ಎಂದು ಹೇಳಲಾಗುತ್ತಿದೆ.
PublicNext
29/11/2024 06:26 pm