ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭದ್ರಾ ಮೇಲ್ದಂಡೆ ಮತ್ತು ನಬಾರ್ಡ್ ಕುರಿತು ಪಿಎಂ ಮೋದಿ ಜೊತೆ ಸಿಎಂ ಡಿಸಿಎಂ ಚರ್ಚೆ

ನವದೆಹಲಿ : ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಪಿಎಂ ಮೋದಿ ಭೇಟಿ ವೇಳೆ ರಾಜ್ಯದ ವಿಚಾರವಾಗಿ ಪಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ನಬಾರ್ಡ್‌ನಿಂದ ನೀಡುತ್ತಿದ್ದ ಸಾಲ ಕಡಿತಗೊಳಿಸರುವ ಬಗ್ಗೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಸಹ ಪ್ರಧಾನಿ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದಾರೆ.

ಅಲ್ದೇ ರಾಜ್ಯ ತೆರಿಗೆ ಹಣದ ಕುರಿತು ಸಹ ಪಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಕಳೆದ ಬಾರಿ ದೆಹಲಿಯಲ್ಲಿ ಭೇಟಿ ವೇಳೆ ಹಣಕಾಸು ಸಚಿವೆ ನಿರ್ಮಾಲಾ ಸೀತರಾಮನ್ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದ ಸಿಎಂ ಸಿದ್ದರಾಮಯ್ಯ ಈಗ ಪಿಎಂ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ನಮ್ಮ ಮನವಿಗೆ ಪ್ರಧಾನಿ ಸ್ಪಂದಿಸುವ ಆಶಾಭಾವನೆಯನ್ನ ಸಿಎಂ ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

29/11/2024 06:08 pm

Cinque Terre

26.82 K

Cinque Terre

0

ಸಂಬಂಧಿತ ಸುದ್ದಿ