ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಅಧಿಕ ಬೆಲೆಗೆ ಔಷಧಿ ಮಾರಾಟ, ಮೆಡಿಕಲ್ ಶಾಪ್ ಸೀಜ್

ಚಿಕ್ಕಬಳ್ಳಾಪುರ: ಖಾಸಗಿ ಮೆಡಿಕಲ್ ಶಾಪ್ ನಲ್ಲಿ ಎಂ ಆರ್ ಪಿ ಬೆಲೆಗಿಂತ ಅಧಿಕ‌ ಬೆಲೆಗೆ ಬ್ಲಡ್ ಕಲೆಕ್ಷನ್ ಟ್ಯೂಬ್ ಮಾರಾಟ ಮಾಡಿದ ಮೆಡಿಕಲ್ ಅಂಡ್ ಜನರಲ್‌ ಸ್ಟೋರ್ ನ್ನು ಸೀಜ್ ಮಾಡಿರುವ ಘಟನೆ ನಡೆದಿದೆ.

ಚಿಂತಾಮಣಿ ತಾಲ್ಲೂಕಿನ ಬುರಡಗುಂಟೆ ಗ್ರಾಮದಲ್ಲಿರುವ ರೋಹಿಣಿ ಮೆಡಿಕಲ್ ಅಂಡ್ ಜನರಲ್ ಸ್ಟೋರ್ ನಿಗದಿತ ದರಕ್ಕಿಂತ ಹೆಚ್ಚು ದರದಲ್ಲಿ ಔಷಧ ಮಾರಾಟ ಮಾಡುತ್ತಿದ್ದಾರೆಂಬ ದೂರಿನ ಆಧಾರದ ಮೇಲೆ,ಸಹಾಯಕ ಔಷಧ ನಿಯಂತ್ರಕರು ಹಾಗೂ ಪರವಾನಿಗೆ ಪ್ರಾಧಿಕಾರಿಗಳಾದ ಬಿ.ಎನ್. ಸವಿತಾ ಅವರು ಮೆಡಿಕಲ್ ಸ್ಟೋರ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ಔಷಧ ಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಕಂಡು ಬಂದಿರುತ್ತದೆ.

ಗ್ರಾಮದ ವ್ಯಕ್ತಿಯೊಬ್ಬರು ಸೆಪ್ಟೆಂಬರ್ 1 ರಂದು ಮೆಡಿಕಲ್‌ ಶಾಪ್ ನಲ್ಲಿ ಬ್ಲಡ್ ಕಲೆಕ್ಷನ್ ಟ್ಯೂಬ್ ಖರೀದಿಸಿದ್ದು, ಎಮ್‌ಆರ್‌ಪಿ ಕೇವಲ ₹2.80 ಇರಬೇಕಾದರೂ,ಅದನ್ನು ₹55ಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ ದೂರು ನೀಡಿದ್ದರು. ಈ ದೂರು ಪರಿಶೀಲಿಸಿದ ಅಧಿಕಾರಿಗಳು, ಮಾರಾಟ ಬಿಲ್ಲುಗಳು ಮತ್ತು ರಿಜಿಸ್ಟರ್‌ಗಳು ಪೂರಕವಾಗಿಲ್ಲ,ವೈದ್ಯ ಮತ್ತು ರೋಗಿಯ ವಿಳಾಸಗಳ ದಾಖಲಾತಿ ಇಲ್ಲ ಹಾಗೂ ಸರಿಯಾದ ಬಿಲ್ ವಿವರಣೆ ನೀಡಿಲ್ಲವೆಂಬ ಕಾರಣಗಳಿಂದ ಬೀಗ ಜಡಿದು,ಪರವಾನಿಗೆಯನ್ನು ಅಮಾನತು ಮಾಡಿದರು.

ಮೆಡಿಕಲ್ ಸ್ಟೋರ್ ಮಾಲೀಕರು ಔಷಧ ಮತ್ತು ಸೌಂದರ್ಯ ವಸ್ತುಗಳ ನಿಯಮ 1945ರ ನಿಯಮ 65 ಅನ್ನು ಉಲ್ಲಂಘಿಸಿರುವುದು ದೃಢಪಟ್ಟಿದ್ದ ಪರಿಣಾಮ ಈ ಉಲ್ಲಂಘನೆಯು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಭೀತಿ ಇರುವುದರಿಂದ,ಮೆಡಿಕಲ್ ಸ್ಟೋರ್ ಪರವಾನಿಗೆಯನ್ನು ತಾತ್ಕಾಲಿಕವಾಗಿ ಅಮಾನತು ಗೊಳಿಸಲಾಗಿದೆ.

Edited By : Shivu K
PublicNext

PublicNext

29/11/2024 05:36 pm

Cinque Terre

18.7 K

Cinque Terre

0