ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಬೇಂದ್ರೆ ಭವನವನ್ನು ಅಭಿವೃದ್ಧಿಗೊಳಿಸಿ - ಹಸನ ತಹಶೀಲ್ದಾರ್

ಶಿರಹಟ್ಟಿ: ಇಂದು ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ಶಿರಹಟ್ಟಿ ಪಟ್ಟಣದಲ್ಲಿ ಇರುವ ಬೇಂದ್ರೆ ಭವನವನ್ನು ಅಭಿವೃದ್ಧಿಗೊಳಿಸಿ ಎಂದು ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಈ ಸಮಯದಲ್ಲಿ ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ಅಧ್ಯಕ್ಷರಾದ ಹಸನ ತಹಶೀಲ್ದಾರ್ ಮಾತನಾಡುತ್ತಾ, ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿದ ಹಾಗೂ ವರಕವಿ ಎಂದೇ ಖ್ಯಾತರಾದ ದ ರಾ ಬೇಂದ್ರೆ ಯವರ ನೆನಪಿಗಾಗಿ ಶಿರಹಟ್ಟಿ ಪಟ್ಟಣದಲ್ಲಿ ಅವರ ಹೆಸರಿನಲ್ಲಿ ಒಂದು ಭವನವನ್ನು ನಿರ್ಮಿಸಲಾಗಿದೆ.

ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಇಚ್ಚೆಯನ್ನು ಹೊಂದಿರುವ ಸಾಹಿತ್ಯ ಪ್ರೇಮಿಗಳಿಗೆ ಇಂದು ನಿರಾಸೆಯಾಗಿದೆ. ಯಾಕೆ ಅಂದರೆ ಬೇಂದ್ರೆ ಭವನವು ಈಗ ಕುಡುಕರ ತಾಣವಾಗಿದೆ, ಅಲ್ಲದೆ ಅಲ್ಲಿ ಅನೈತಿಕ ಚಟುವಟಿಕೆಗಳು ಕೂಡಾ ನೆಡೆಯುತ್ತಿವೆ ಎಂದು ತಮ್ಮ ಅಳಲು ತೋಡಿಕೊಂಡರು.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ವರಕವಿ ಬೇಂದ್ರೆಯವರ ಹೆಸರಿನಲ್ಲಿ ಇರುವ ಭವನವನ್ನು ಸ್ವಚ್ಚಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬರುವ ಹಾಗೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

ಈ ಸಂದರ್ಭದಲ್ಲಿ ಅಜ್ಜಪ್ಪ ಬಿಡವೆ, ಸುನೀಲ ಸರ್ಜಾಪೂರ, ಶರೀಫ ಗುಡಿಮನಿ, ಸುನೀಲಗೌಡ.ಪಾಟೀಲ, ಪ್ರಕಾಶ.ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

29/11/2024 02:31 pm

Cinque Terre

16.1 K

Cinque Terre

0

ಸಂಬಂಧಿತ ಸುದ್ದಿ