ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೋಗದ ಜೀವನ ಕೊನೆಗೊಳಿಸಿ ಸನ್ಯಾಸಿಯಾದ ಏರ್ಸೆಲ್‌ ಮಾಜಿ ಮಾಲಿಕನ ಮಗ, ಕುಟುಂದಿಂದ ಬೆಂಬಲ

ಏರ್‌ಸೆಲ್‌ನ ಮಾಜಿ ಮಾಲೀಕ ಹಾಗೂ ಚೆನ್ನೈ ಸೂಪರ್‌ ಕಿಂಗ್‌ ಪ್ರಾಯೋಜಕರು ಹಾಗೂ ಮಲೇಷಿಯಾದ ಟೆಲಿಕಾಂ ಉದ್ಯಮಿ ಆನಂದ ಕೃಷ್ಣನ್ ಅವರ ಪುತ್ರ ಅಜಾನ್ ಸಿರಿಪಾನ್ಯೊ ಸನ್ಯಾಸಿ ದೀಕ್ಷೆ ತೆಗೆದು ಸ್ವಾಮೀಜಿಯಾಗಿದ್ದಾರೆ. ಆನಂದ್‌ ಕೃಷನ್‌ ₹40,000 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿರುವ ಮಲೇಷ್ಯಾದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.ಇವರ ಪುತ್ರ ಸಿರಿಪಾನ್ಯೂ ತನ್ನ 18 ನೇ ವಯಸ್ಸಿಗೆ ಭೋಗ ಜೀವನ ತ್ಯಜಿಸಿ ಸನ್ಯಾಸಿಯಾಗಿದ್ದು ಎಲ್ಲರಿಗೂ ಆಶ್ವರ್ಯ ಉಂಟು ಮಾಡಿದೆ.

ದೂರಸಂಪರ್ಕ, ಉಪಗ್ರಹಗಳು, ಮಾಧ್ಯಮ, ತೈಲ, ಅನಿಲ ಮತ್ತು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾನ್ಯನ್‌ ಆಗಿರುವ ಆನಂದ್‌ ಕೃಷ್ಣ ಅವರ ಮಡದಿ ಮೊಮ್ವಜಾರೋಂಗ್ಸೆ ಸುಪ್ರಿಂದಾ ಚಕ್ರಬನ್ ಕೂಡ ಶ್ರೀಮಂತ ಮನೆತನದವರಾಗಿದ್ದು ರಾಜಮನೆತನದೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ.ಆರಂಭದಲ್ಲಿ ತಾತ್ಕಾಲಿಕ ದೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದ ಸಿರಿಪಾನ್ಯೋ ಶಾಶ್ವತ ಸನ್ಯಾಸಿ ಜೀವನಕ್ಕೆ ತಲೆ ಬಾಗಿ ಥೈಲ್ಯಾಂಡ್-ಮ್ಯಾನ್ಮಾರ್ ಗಡಿಯ ಸಮೀಪದಲ್ಲಿರುವ ಡಿಟಾವೊ ದಮ್ ಮಠದ ಮಠಾಧೀಶರಾಗಿದ್ದಾರೆ.

Edited By : Suman K
PublicNext

PublicNext

29/11/2024 12:18 pm

Cinque Terre

11.93 K

Cinque Terre

0

ಸಂಬಂಧಿತ ಸುದ್ದಿ