ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಉಡುಪಿ-ಕಾಸರಗೋಡು 400 ಕೆ.ವಿ ವಿದ್ಯುತ್ - ಅಪಾಯಕಾರಿ ಯೋಜನೆಯ ವಿರುದ್ಧ ಧ್ವನಿಯೆತ್ತದ ಜನಪ್ರತಿನಿಧಿಗಳು

ವಿಟ್ಲ ಉಡುಪಿ-ಕಾಸರಗೋಡು 400ಕೆ.ವಿ ವಿದ್ಯುತ್ ಪ್ರಸರಣ ಮಾರ್ಗ ಹೆಚ್ಚು ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ಸಮುದ್ರ ಕಿನಾರೆ ಅಥವಾ ಹೆದ್ದಾರಿಯ ಬದಿಯಲ್ಲಿ ಭೂಗತ ಕೇಬಲ್ ಮೂಲಕ ತೆಗೆದುಕೊಂಡು ಹೋಗಬೇಕು. ಜಿಲ್ಲೆಯ ಜನರ ಮಾರಣ ಹೋಮಕ್ಕೆ ವೇದಿಕೆ ನಿರ್ಮಾಣವಾಗುತ್ತಿರುವ ಯೋಜನೆಯ ಬಗ್ಗೆ ಯಾವುದೇ ಪಕ್ಷದ ನಾಯಕರು ಮಾತನಾಡದೇ ಅದಾನಿಯ ಹಿಂದೆ ಅಡಗಿ ಕೂತಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆರೋಪಿದ್ದಾರೆ.

ವಿಟ್ಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಅದಾನಿ ಕಂಪೆನಿಯ ಟ್ರೋಕರ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದು, ರೈತರ ಪರ ಮಾತೆತ್ತುತ್ತಿಲ್ಲ. ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ಕಂಪೆನಿಗೋಸ್ಕರ ದುಡಿಯುತ್ತಿದ್ದಾರೆ. ಅರಣ್ಯ ಇಲಾಖೆ ಆದಾನಿ ಕಂಪೆನಿ ಆದೇಶ ಪಾಲಿಸಿ 10 ಸಾವಿರಕ್ಕೂ ಅಧಿಕ ಮರಗಳ ಮಾರಣ ಹೋಮ ಮಾಡುತ್ತಿದೆ. ಪರಿಸರವಾದಿಗಳು, ಅರಣ್ಯ ರಕ್ಷಕರು ನಾಪತ್ತೆಯಾಗಿ ದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ, ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯಿಂದ 3,450 ಎಕರೆ ಕೃಷಿ ಭೂಮಿ, ಅಂದಾಜು 1.65 ৩ ৬ ১, 1.200 ಕಾಳುಮೆಣಸು ಹಾನಿಯಾಗಲಿದೆ. ನಾಲ್ಕೂವರೆ ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಯೋಜನೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತಿಲ್ಲ. ಶೇ.97ಮಂದಿಗೆ ಅಪಾಯಕಾರಿ ವಿದ್ಯುತ್ ಮಾರ್ಗದ ಬಗ್ಗೆ ಅರಿವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಚಿತ್ತರಂಜನ್ ಎನ್. ಎಸ್.ಡಿ., ರೋಹಿತಾಶ್ವ ಬಂಗ, ಶ್ಯಾಮ್ ವಿಟ್ಲ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/11/2024 12:10 pm

Cinque Terre

2.19 K

Cinque Terre

0

ಸಂಬಂಧಿತ ಸುದ್ದಿ