ಕುಂದಗೋಳ : ಹಿಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಸುವ ರೈತಾಪಿ ಜನರಿಗೆ ತಾಂತ್ರಿಕ ಸಮಸ್ಯೆ ಎದುರಾಗಿ ರೈತ ಬೆಳೆ ವಿಮೆ ಭರಿಸಲು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹೌದು ! ಈಗಾಗಲೇ ಬೆಳೆ ವಿಮೆ ಭರಿಸಿಕೊಳ್ಳುವ ಖಾಸಗಿ ಕಂಪನಿಗಳು ಹಿಂಗಾರು ಬೆಳೆ ವಿಮೆ ಸಲ್ಲಿಸಲು ಅವಕಾಶ ನೀಡಿ ನವೆಂಬರ್ 30ಕ್ಕೆ ಕೊನೆಯ ದಿನಾಂಕ ನಿಗದಿ ಮಾಡಿವೆ.
ಹೀಗೆ ಬೆಳೆ ವಿಮೆ ಸಲ್ಲಿಸಲು ಬಯಸುವ ರೈತರು ಗ್ರಾಮ್ ಒನ್, ಕರ್ನಾಟಕ ಒನ್, ಸಿ.ಎಸ್.ಸಿ ಸೆಂಟರ್ ಸೇರಿದಂತೆ ಯಾವೊದೋ ಕಂಪ್ಯೂಟರ್ ಅಂಗಡಿಗೆ ತೆರಳಿದಲ್ಲಿ ಬೆಳೆ ವಿಮೆ ಅರ್ಜಿ ಫೈನಲ್ ಸ್ಟೇಜ್ ಪೇಮೆಂಟ್ ಆಪ್ಷನ್ ಸಕ್ಸಸ್ ಆಗುತ್ತಿಲ್ಲಾ, ಈ ಕಾರಣ ಕೆಲವರು ಬೆಳೆ ವಿಮೆ ತುಂಬಲು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮುಖ್ಯವಾಗಿ ಮಳೆ ಆಶ್ರಿತ ಹಿಂಗಾರು ಬೆಳೆ ವಿಮೆ ಸಲ್ಲಿಸಲು ನವೆಂಬರ್ 30 ಅಂತಿಮವಾಗಿದ್ದು, ಗೋಧಿ, ಕಡಲೆ, ಜೋಳ ಬೆಳೆದ ರೈತರು ತಾಂತ್ರಿಕ ಸಮಸ್ಯೆಗೆ ಸಿಲುಕಿ ವಿಮಾ ಕಂಪನಿ ಸಮಸ್ಯೆ ಸ್ಪಂದಿಸಲು ಒತ್ತಾಯ ಮಾಡಿದ್ದಾರೆ.
ಇನ್ನೂ ಈ ಬಗ್ಗೆ ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ನಿರ್ದೇಶಕರಿಗೆ ಮಾಹಿತಿ ಸಲ್ಲಿಸಿ ಬೆಳೆ ವಿಮೆ ಸಲ್ಲಿಸಲು ಹೆಚ್ಚಿನ ಅವಕಾಶ ನೀಡಿದರೆ ರೈತರಿಗೆ ವರವಾಗಲಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
29/11/2024 09:52 am