ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆ ಮಧ್ಯಾಹ್ನಕ್ಕೆ ಮುಂದೂಡಿಕೆ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ A-2 ಆರೋಪಿ ನಟ ದರ್ಶನ್​ ನಿಯಮಿತ (ರೆಗ್ಯೂಲರ್) ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನಾಳೆ ಮಧ್ಯಾಹ್ನಕ್ಕೆ ಮುಂದೂಡಿ ಆದೇಶ ನೀಡಿದೆ. ದರ್ಶನ್​​ ಸೇರಿ ಒಟ್ಟು ಆರೋಪಿಗಳ ಜಾಮೀನು ಅರ್ಜಿ ಮುಂದೂಡಲಾಗಿದೆ.

ನ್ಯಾ.ಎಸ್. ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ಇಂದು ವಿಚಾರಣೆ ನಡೆದಿದ್ದು, ದರ್ಶನ್​ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ಪೊಲೀಸರು ಸಿದ್ಧಪಡಿಸಿದ ಹೆಚ್ಚುವರಿ ಚಾರ್ಜ್​​ಶೀಟ್​​ನಲ್ಲಿ ಲೋಪದೇಷಗಳಿವೆ ಎಂದು ಪ್ರಸ್ತಾಪಿಸಿ, ಸಾಕ್ಷಿಗಳ ಹೇಳಿಕೆಗಳನ್ನು ತಡವಾಗಿ ಪಡೆಯಲಾಗಿದೆ.

ಬೆಂಗಳೂರಿನಲ್ಲೆ ಕೆಲ ಸಾಕ್ಷಿಗಳ ಇದ್ದರೂ, ಅವರ ಹೇಳಿಕೆಗಳನ್ನು ತಡವಾಗಿ ಪಡೆದಿದ್ದೇಕೆ. ಸಾಕ್ಷಿಗಳ ಹೇಳಿಕೆಯಂತೆ ಪಟ್ಟಣಗೆರೆ ಶೆಡ್​​ಗೆ ಯಾರು ಬಂದರು, ಯಾವಾಗ ಬಂದರು ಎಂಬ ಸ್ಪಷ್ಟತೆ ಇಲ್ಲ.

ಪೊಲೀಸರು ಇತ್ತೀಚೆಗೆ ಸಾಕ್ಷಿ ಓರ್ವನ ಮೊಬೈಲ್​​ನಿಂದ ರಿಟ್ರಿವ್ ಮಾಡಲಾದ ಫೋಟೋಗಳನ್ನು ಸಾಕ್ಷಿ ಧರಿಸಿದ್ದ ಪ್ಯಾಂಟ್​, ಪೊಲೀಸರು ದಾಖಲಿಸಿದ್ದ ಬೇರೆ ಇದೆ. ಕೊಲೆ ನಡೆದದ್ದನ್ನು ಮಾಧ್ಯಮಗಳಲ್ಲಿ ನೋಡಿದಾಗ ತಿಳಿಯಿತು ಎಂದಿದ್ದಾರೆ.

ಸಾಕ್ಷಿಗಳನ್ನು ಸ್ಪಷ್ಟವಾಗಿ ಸೃಷ್ಟಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಲು ತನಿಖಾಧಿಕಾರಿ ವಿಳಂಬ ಮಾಡಲಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ವಾದ ಮಂಡಿಸಿದರು.

Edited By : Abhishek Kamoji
PublicNext

PublicNext

28/11/2024 05:37 pm

Cinque Terre

20.99 K

Cinque Terre

0