ಗಂಗಾ ನದಿ ಶತ ಶತಮಾನಗಳಿಂದಲೂ ಪೂಜನೀಯ ನದಿಯಾಗಿ ಗುರುತಿಸಿಕೊಂಡಿದೆ. ಹಿಂದೂಗಳು ನಂಬಿರುವಂತೆ ಗಂಗಾ ಜಲವು ಪಾಪಗಳನ್ನು ಪರಿಹರಿಸುವ ಶಕ್ತಿ ಹೊಂದಿದೆ ಹಾಗೂ ಆತ್ಮವನ್ನು ಶುದ್ಧೀಕರಿಸುತ್ತದೆ. ಹಾಗಾಗಿ ಯಾವುದೇ ಶುಭ ಕಾರ್ಯಗಳಲ್ಲಿ ಕೂಡ ಮೊದಲಿಗೆ ಗಂಗಾ ಜಲದಿಂದ ಶುದ್ಧೀಕರಿಸಿ ನಂತರ ಮುಂದಿನ ಕಾರ್ಯಗಳನ್ನು ಮಾಡಲಾಗುತ್ತದೆ.
ಒಂದೆಡೆ ಪವಿತ್ರ ನದಿಯಾಗಿ ಗುರುತಿಸಿಕೊಂಡಿರುವ ಗಂಗಾ ನದಿ ಕೈಗಾರಿಕೆಗಳು ಹಾಗೂ ಒಳಚರಂಡಿಗಳ ವ್ಯವಸ್ಥೆಯಿಂದ ಅಶುದ್ಧ ಹಾಗೂ ಅಪವಿತ್ರವಾಗುತ್ತಿದೆ. ಇದೇ ನೀರನ್ನೇ ಹೆಚ್ಚಿನ ಜನರು ಕುಡಿಯಲು ಹಾಗೂ ಸ್ನಾನಕ್ಕೆ ಬಳಸುತ್ತಾರೆ. ಅದಾಗ್ಯೂ ಗಂಗಾ ನದಿಯ ನೀರು ಸ್ವಯಂ ಶುದ್ಧೀಕರಣಗೊಳ್ಳುವ ಶಕ್ತಿ ಹೊಂದಿದೆ ಎಂಬುದು ಹಲವಾರು ಜನರ ನಂಬಿಕೆಯಾಗಿದೆ.
ಉತ್ತರ ಪ್ರದೇಶ ಸೆಂಟ್ರಲ್ ಪೊಲ್ಯುಶನ್ ಬೋರ್ಡ್ (ಸಿಪಿಸಿಬಿ) ಇದೀಗ ಅಲಹಾಬಾದ್ ಕೋರ್ಟ್‌ಗೆ ಆಘಾತಕಾರಿ ವಿಷಯವೊಂದನ್ನು ತಿಳಿಸಿದ್ದು, ಗಂಗಾ ನೀರು ಕುಡಿಯಲು ಯೋಗ್ಯವಲ್ಲವೆಂದು ಹೇಳಿದೆ.
ಆದರೆ ಐಐಟಿ ಖಾನ್‌ಪುರದ ಇತ್ತೀಚಿನ ಅಧ್ಯಯನ ಈ ಹೇಳಿಕೆಗೆ ಸವಾಲೊಡ್ಡಿದ್ದು, ಅಧ್ಯಯನವು ಗಂಗೋತ್ರಿಯಿಂದ ರಿಷಿಕೇಶದವರೆಗೆ 28 ಪ್ಯಾರಾಮೀಟರ್ ವಲಯದ ನೀರನ್ನು ಪರೀಕ್ಷೆಗೊಳಪಡಿಸಿದ್ದು, ಕುಡಿಯಲು ಸಮರ್ಥವಾಗಿದೆ ಎಂದು ವಾದಿಸಿದೆ.
ಇದೇ ಕುರಿತು ಸಾಮಾಜಿಕ ತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಪವಿತ್ರ ಗಂಗಾ ನದಿಯ ನೀರು ಶುದ್ಧವಾಗಿದ್ದು ಕುಡಿಯಲು ಸಮರ್ಥವಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿಕೆ ನೀಡಲಾಗಿದೆ. ಆಶು ಗಾಯ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಜ್ಞರು ಕೂಡ ನೀರನ್ನು 40 ಎಕ್ಸ್ ಮೈಕ್ರೋಸ್ಕೋಪ್‌ನಲ್ಲಿ ನೀರನ್ನು ಪರಿಶೀಲಿಸಿದ್ದು, ಗಂಗಾಜಲದಲ್ಲಿ ಯಾವುದೇ ಗೋಚರ ಮಾಲಿನ್ಯಕಾರಕಗಳು ಅಥವಾ ಜೀವಿಗಳಿಲ್ಲ ಎಂದು ಖಾತ್ರಿಪಡಿಸಿದ್ದಾರೆ.
PublicNext
28/11/2024 03:40 pm