ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭುಜದ ಮೇಲೆ ತೆಲೆಹೊಟ್ಟು ಉದುರಿ ಮುಜುಗರ ತಂದಿಡುತ್ತಿದೆಯಾ? ಚಳಿಗಾಲದಲ್ಲಿ ಕಾಡುವ ಈ ಸಮಸ್ಯೆಗೆ ಮುಕ್ತಿ ನೀಡಲು ಹೀಗೆ ಮಾಡಿ

ಚಳಿಗಾಲದಲ್ಲಿ ಆಗುವ ತಲೆಹೊಟ್ಟು ಸಮಸ್ಯೆ ಮುಜುಗರ ಜೊತೆ ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತದೆ.ತಲೆಹೊಟ್ಟು ತಲೆಯಲ್ಲಿ ಆಗುವ ಒಣ ಚರ್ಮದ ಪದರಗಳು ತುರಿಸಿದಾಗ ಕೈ ಯಲ್ಲಿ ಸಿಗುತ್ತದೆ.ಜನಸಂಖ್ಯೆಯ ಅರ್ಧದಷ್ಟು ಜನರ ಮೇಲೆ ಇದು ಪರಿಣಾಮ ಬೀರುತ್ತದೆ. ತಲೆಹೊಟ್ಟು ಬಂದು ಹೋಗುವ ಖಾಯಿಲೆಯಲ್ಲ ಇದು ಚಳಿಗಾಲದಲ್ಲಿ ಉಲ್ಬಣಗೊಳ್ಳುತ್ತದೆ.ಶುಷ್ಕ ಮತ್ತು ತಂಪಾದ ಗಾಳಿಯಿಂದಾಗಿ ನೆತ್ತಿಯ ತೇವಾಂಶವನ್ನು ತ್ವರಿತವಾಗಿ ಕಳೆದುಕೊಳ್ಳುವಂತೆ ಮಾಡಿ ಇದು ಹೆಚ್ಚಾಗುತ್ತದೆ. ಡ್ಯಾಂಡ್ರಫ್‌ ನಿಂದ ಬಚಾವ್‌ ಆಗಲು ನೀವು ಗಮನಿಸಬೇಕಾದ ಅಂಶಗಳು ಹೀಗಿವೆ ನೋಡಿ.

ಚಳಿಗಾಲದಲ್ಲಿ ಆಂಟಿ-ಡ್ಯಾಂಡ್ರಫ್ ಶಾಂಪೂ ಬಳಸುವುದು ಅತ್ಯಗತ್ಯ.ಆಂಟಿ-ಡ್ಯಾಂಡ್ರಫ್ ಹೇರ್ ಮಾಸ್ಕ್ ಅನ್ನು ಬಳಸುವುದರಿಂದ ತುರಿಕೆ ಕಡಿಮೆಯಾಗುತ್ತದೆ,99.9% ರಷ್ಟು ಸಹಾಯ ಮಾಡುತ್ತದೆ.

ಅತಿಯಾಗಿ ಬಿಸಿ ಶವರ್ ನಲ್ಲಿ ಸ್ನಾನ ಮಾಡಬೇಡಿ ಇದು ನೆತ್ತಿಯಿಂದ ನೈಸರ್ಗಿಕ ತೈಲಗಳನ್ನು ತೆಗೆದು ಹಾಕುತ್ತದೆ.ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರು ಜೊತೆಗೆ ಸಲ್ಫೇಟ್ ಮತ್ತು ಪ್ಯಾರಾಬೆನ್-ಮುಕ್ತ ಶಾಂಪೂ ಬಳಸಿ.

ಕೂದಲನ್ನು ಪ್ರತಿದಿನ ಬಾಚಬೇಕು ಇದು ಕೂದಲು ಮತ್ತು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.ಒದ್ದೆಯಾದ ಕೂದಲನ್ನು ಕಟ್ಟಬಾರದು ಇದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಉತ್ಪತ್ತಿಗೆ ಕಾರಣವಾಗುತ್ತದೆ.

ಬಿಸಿ ತೆಂಗಿನ ಎಣ್ಣೆಯಿಂದ ಕೂದಲು ಮಸಾಜ್‌ ಮಾಡಿ ಹೈಡ್ರೇಟಿಂಗ್ ಹೇರ್ ಮಾಸ್ಕ್ ಜೊತೆಗೆ ಸ್ಟೀಮ್ ತೆಗೆದುಕೊಳ್ಳುವುದರ ಮೂಲಕ ಕೂದಲು ತೇವಾಂಶ ಹಿಡಿದಿಟ್ಟುಕೊಳ್ಳುವಂತೆ ನೋಡಿಕೊಳ್ಳಿ

ಹೆಚ್ಚು ನೀರು ಕುಡಿಯಿರಿ,ನಿರ್ಜಲೀಕರಣದಿಂದ ತಲೆಹೊಟ್ಟು ಸಮಸ್ಯೆ ಹೆಚ್ಚಾಗುತ್ತದೆ

ಬೀಜಗಳು, ದ್ವಿದಳ ಧಾನ್ಯಗಳು, ಮೀನು, ಅಣಬೆ, ಸೋಯಾ ಮುಂತಾದ ನಿಮ್ಮ ನೆತ್ತಿಯ ಆರೋಗ್ಯವನ್ನು ಹೆಚ್ಚಿಸಲು ನಿಮ್ಮ ಆಹಾರದಲ್ಲಿ ಪ್ರೋಟೀನ್ ಮತ್ತು ಒಮೆಗಾ 3 ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ.

Edited By : Suman K
PublicNext

PublicNext

27/11/2024 07:48 pm

Cinque Terre

24.61 K

Cinque Terre

0