ಪ್ಯಾರಿಸ್ : ಅರೆನಗ್ನವಸ್ಥೆಯಲ್ಲಿ “ಮಹಿಳೆಯರ ಮೇಲಿನ ಯುದ್ಧವನ್ನು ನಿಲ್ಲಿಸಿ” ಎಂದು ಎದೆಯ ಮೇಲೆ ಬರೆದುಕೊಂಡು ಮತ್ತು ಕೈಯಲ್ಲಿ “ಮಹಿಳೆಯರ ಜೀವನ ಸ್ವಾತಂತ್ರ್ಯ” ಎಂಬ ಬೋರ್ಡ್‌ಗಳನ್ನು ಹಿಡಿದು ಪ್ರತಿಭಟಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಖಾತೆದಾರರು “ಮುಸ್ಲಿಂ ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಸಹೋದರಿಯರು ಮುಸ್ಲಿಂ ನೆಲದಲ್ಲಿಯೇ ಹಿಜಾಬ್ ಅನ್ನು ಕಿತ್ತೆಸೆದು ಅರೆನಗ್ನವಸ್ಥೆಯಲ್ಲಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಹೆಣ್ಣಾಗಿ ಈ ರೀತಿ ಪ್ರತಿಭಟಿಸುತ್ತಿದ್ದಾರೆ ಎಂದರೆ ಅವರಿಗೆ ಇನ್ನೆಷ್ಟು ನೋವಾಗಿರಬೇಡ. ಭಾರತದ ಕನ್ವರ್ಟೆಡ್ ಗಳಿಗೆ ಯಾವಾಗ ಅರ್ಥವಾಗುತ್ತದೆಯೋ?” ಎಂದು ಬರೆದು ಹಂಚಿಕೊಂಡಿದ್ದಾರೆ.
ಆದ್ರೆ ವೈರಲ್ ಸಂದೇಶ ಸುಳ್ಳಾಗಿದ್ದು. ಈ ಘಟನೆ ಯಾವುದೇ ಮುಸ್ಲಿಂ ದೇಶದಲ್ಲಿ ಷರಿಯಾ ಕಾನೂನಿನ ವಿರುದ್ಧ ಮಹಿಳೆಯರು ಪ್ರತಿಭಟಿಸಿರುವ ವಿಡಿಯೋವಲ್ಲ. ಇದು ಪ್ಯಾರಿಸ್‌ನಲ್ಲಿ ಸ್ತ್ರೀಹತ್ಯೆ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಖಂಡಿಸಿ ಕೆಲವು ಮಹಿಳೆಯರು ಮತ್ತು ಪುರುಷರು ನಡೆಸಿದ ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧದ ಪ್ರತಿಭಟನೆಯಾಗಿದೆ.
ವೈರಲ್ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಹೋದಾಗ ಈ ಘಟನೆ ನಡೆದಿರುವ ಕುರಿತು ಅನೇಕರು ಎಕ್ಸ್‌ನಲ್ಲಿ ಹಂಚಿಕೊಂಡಿರುವುದು ಮತ್ತು ಸುದ್ದಿ ವರದಿಗಳು ಲಭ್ಯವಾಗಿವೆ. ಆದ್ದರಿಂದ ಮುಸ್ಲಿಂ ಷರಿಯಾ ಕಾನೂನಿಗೆ ಬೇಸತ್ತು ಮುಸ್ಲಿಂ ಸಹೋದರಿಯರು ಮುಸ್ಲಿಂ ನೆಲದಲ್ಲಿಯೇ ಪ್ರತಿಭಟಿಸಿದ್ದಾರೆ ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ಪ್ಯಾರಿಸ್‌ನಲ್ಲಿ ನಡೆದ ಪ್ರತಿಭಟನೆಯಾಗಿದೆ.
PublicNext
27/11/2024 01:25 pm