ಬೆಂಗಳೂರು : ಹೊರಗಡೆ ಹೋಗುವಾಗ ಸ್ವೆಟರ್ ಹಾಕಿ, ಕೈಗೆ ಗ್ಲೌಸ್, ಕಾಲಿಗೆ ಸಾಕ್ಸ್ ಹಾಕುವ ಸ್ಥಿತಿ ಬಂದಿದೆ. ರಾಜಧಾನಿಯಲ್ಲಿ ಸಂಜೆಯಿಂದಲೇ ಚಳಿಯ ಅನುಭವ ಶುರುವಾಗಿದ್ರೆ, ಮಧ್ಯರಾತ್ರಿ ಇಬ್ಬನಿಯ ಆಟ ಆರಂಭ. ಈ ಬಾರಿ ರಾಜ್ಯಕ್ಕೆ ಬೇಗ ಎಂಟ್ರಿ ಕೊಟ್ಟಿದೆ ಮಾಗಿ ಚಳಿ.
ಹೌದು, ಇನ್ನಷ್ಟು ಕೂಲ್ ಕೂಲ್ ಸೀತಿಯಾಗಲಿದೆ ರಾಜಧಾನಿ ಬೆಂಗಳೂರು. ಲಾನಿನೋ ಸ್ಥಿತಿಯಿಂದಾಗಿ ರಾಜ್ಯದಲ್ಲಿ ಈ ಬಾರಿ ಚಳಿ ಪ್ರಮಾಣ ತೀವ್ರವಾಗಲಿದೆ, 12 ಡಿಗ್ರಿಗೆ ಕುಡಿಯಲಿದ್ಯಂತೆ ಬೆಂಗಳೂರಿನ ತಾಪಮಾನ.
ಪೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮುನ್ಸೂಚನೆ ಇದ್ದು, ಈ ಪ್ರಕ್ರಿಯೆಗೆ ಲ್ಯಾನಿನೋ ಅನ್ನೋ ಹೆಸರಿದೆ. ಸಾಮಾನ್ಯವಾಗಿ ನವಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಲ್ಯಾನಿನೋ ಪರಿಸ್ಥಿತಿ ಎದುರಾಗುತ್ತಿತ್ತು, ಆದರೆ ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ಹಿನ್ನೆಲೆಯೂ ಬೇಗ ಚಳಿ ಎಂಟ್ರಿ ಕೊಟ್ಟಿದೆ.
Kshetra Samachara
26/11/2024 11:54 am