ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಮಹಾಭಾರತದ ಓದು ಇವತ್ತಿಗೂ ಪ್ರಸ್ತುತ - ಲಕ್ಷ್ಮೀಶ ತೋಳ್ಪಾಡಿ

ಕಟೀಲು : ಮಹಾಭಾರತ ಹಳೆಕಾಲದ ಗ್ರಂಥ. ಇದನ್ನು ಓದದಿದ್ದರೆ ಏನೂ ಆಗುವುದಿಲ್ಲ. ಮಹಾಭಾರತವನ್ನು ಓದಿದರೆ ಕಾಡಬೇಕು. ಗೆದ್ದವನ ದುಃಖ ಬೇರೆ ಯಾವ ಗ್ರಂಥದಲ್ಲೂ ಇಲ್ಲ. ಯುದ್ಧವಾಗಿ ಪಾಂಡವರು ಗೆದ್ದು ಧರ್ಮ ಗೆದ್ದಿತು. ಮಹಾಭಾರತ ಎಂದರೆ ಜಯ. ಗೆದ್ದ ಸಂಭ್ರಮ. ಆದರೆ ಚಕ್ರವರ್ತಿ ಆದ ಧರ್ಮರಾಯ ಯುದ್ದ ಗೆದ್ದದ್ದು, ಜಯ ಎನ್ನುತ್ತಾರೆ. ಸಂಭ್ರಮ ಎನ್ನುತ್ತಾರೆ. ಆದರೆ ಇದು ಗೆಲುವಿನ ರೂಪದಲ್ಲಿರುವ ಸೋಲು ಎಂದ. ಇದು ಮಹಾಭಾರತದಲ್ಲಿ ಮಾತ್ರ ಇರುವುದು. ಹೀಗೆ ಮಾನವ ಇತಿಹಾಸ ನಡೆದು ಬಂದ ದಾರಿಯನ್ನು ಜೀವನವನ್ನು ಇನ್ನೊಂದು ದೃಷ್ಟಿಯಿಂದ ನೋಡಲಿಕ್ಕೆ ಸಾಧ್ಯ. ನಮ್ಮ ಪರವಾಗಿ, ಇನ್ನೊಬ್ಬರ ವಿರುದ್ಧವಾಗಿ ಮಾತನಾಡುವುದು ಸುಲಭ. ಪರಂಪರೆಯಲ್ಲಿ ವ್ಯಾಸರನ್ನು ದೇವರು ಎನ್ನುತ್ತಾರೆ. ಧರ್ಮರಾಯನ ದುಃಖ ಅಂದರೆ ಅದನ್ನು ಬರೆದ ವ್ಯಾಸರ ದುಃಖವೂ. ಅಂದರೆ ಮನುಷ್ಯರ ಚರಿತ್ರೆಯನ್ನು ಬರೆದ ದೇವರ ದುಃಖ. ನಮ್ಮನ್ನೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಇಂತಹ ಚಿಂತನೆಗಳಿಂದಲೇ ಮಹಾಭಾರತ ಇವತ್ತಿಗೂ ಪ್ರಸ್ತುತ ಹೀಗಂದರು ಚಿಂತಕ ಲಕ್ಷ್ಮೀಶ ತೋಳ್ಪಾಡಿ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾಸಂಸ್ಥೆಯ ಸಂಯೋಜನೆಯಲ್ಲಿ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬದ ಎರಡನೆಯ ದಿನ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಅವರು ಹೇಳಿದ್ದು, ಪ್ರತಿಯೊಬ್ಬರೂ ಜೀವನದಲ್ಲಿ ನಾವು ಏನೋ ಆಗಬೇಕು ಎಂದು ಬಯಸುತ್ತಿರುತ್ತೇವೆ. ಆ ಏನೋ ಒಂದು ಆಗುವ ಸಾಧ್ಯತೆ ಇದೆ. ಸಂಕಟ ಪಡೆಯದೆ ಸಾಕ್ಷಾತ್ಕಾರ ಕಷ್ಟ. ದೊಡ್ಡ ದೊಡ್ಡ ಪದಗಳ ಜೊತೆಗೆ ಇರುವುದು ಸತ್ಯ ಶೋಧನೆ. ಶೋಧನೆ ಮಾಡದೆ ಸತ್ಯ ತಿಳಿಯುವುದಿಲ್ಲ. ಧರ್ಮ ಸಂಕಟ ಎಂಬ ಪದವೂ ಹಾಗೆಯೇ. ವ್ಯಕ್ತಿತ್ವವನ್ನೇ ಕಲಿತದ್ದನ್ನು ಪಣಕ್ಕಿಡದೆ ಸತ್ಯಶೋಧನೆ ಆಗುವುದಿಲ್ಲ. ಪಡಲೇಬೇಕಾದ ದುಃಖ ಅಥವಾ ಸಂಕಟ ಎನ್ನುವುದು ಜೀವನದ ಮೊದಲ ದರ್ಶನ. ಒಂದು ಗಿಡ ಬೆಳೆದು, ಪ್ರಕೃತಿಯಿಂದ ಅದು ಬೇಕಾದುದನ್ನು ಪಡೆದು, ಕೊಡಬೇಕಾದುದನ್ನು ಕೊಟ್ಟು, ಅದರ ಜೀವನವನ್ನು ಚೆನ್ನಾಗಿ ಮಾಡಲಿಕ್ಕೆ ಮನುಷ್ಯರ ಸಹಕಾರ ಬೇಕಾಗಿಯೇ ಇಲ್ಲ ಎಂದರು. 

Edited By : PublicNext Desk
Kshetra Samachara

Kshetra Samachara

23/11/2024 10:17 pm

Cinque Terre

286

Cinque Terre

0

ಸಂಬಂಧಿತ ಸುದ್ದಿ