ಕುಂದಗೋಳ: ನಮಸ್ಕಾರ ರೀ ಕುಂದಗೋಳ ತಾಲೂಕಿನ ಮಹಾಜನತೆಗೆ... ನೋಡ್ರಿ, ಇವತ್ತ್ ಅಂದ್ರ್ ನವೆಂಬರ್ 23 ನಾಲ್ಕನೇ ಶನಿವಾರ ಸರ್ಕಾರಿ ರಜೆ ಐತಿ. ಹಿಂಗಿದ್ರೂ ನಮ್ಮ ಕುಂದಗೋಳ ತಾಲೂಕಿನ ಕೆಲವೊಂದು ಸರ್ಕಾರಿ ಇಲಾಖೆಯ ಅಧಿಕಾರಿಗಳು ಎದ್ನೋ ಬಿದ್ನೋ ಅಂತ್ಹೇಳಿ ಎಲ್ಲಾ ವರದಿ ತಯಾರಿ ಮಾಡಿಕೊಂಡ ಕಚೇರಿ ಬಾಗಿಲು ತಗದ ಕುಂತಾರ್..
ಅರೆ ! ಏನ್ರೀ ? ಸರ್ಕಾರಿ ರಜಾ ದಿನವೂ ಯಾಕ್ ಅಧಿಕಾರಿಗಳು ಆಫೀಸ್‌ಗೆ ಬಂದಾರ ಅಂತಿರೇನು? ಅಲ್ಲೇ, ಇರೋದು ಮ್ಯಾಜಿಕ್... ನಮ್ಮ ಧಾರವಾಡಕ್ಕೆ ನವೆಂಬರ್ 21ಕ್ಕೆ ಬಂದಂತಹ ಕರ್ನಾಟಕ ಉಪಲೋಕಾಯುಕ್ತರ ನ್ಯಾಯಮೂರ್ತಿ ಕೆ.ಎನ್.ಫಣಿಂದ್ರ ಅವರು ಅನಿರೀಕ್ಷಿತವಾಗಿ ಧಾರವಾಡ ಜಿಲ್ಲೆಯ ವಿವಿಧ ಇಲಾಖೆಗೆ ಭೇಟಿ ನೀಡಾಕುಂತಾರ. ಅದಕ್ಕ ಎಲ್ಲಾ ಕಚೇರಿ ಅಧಿಕಾರಿಗಳು ಫುಲ್ ಅಲರ್ಟ್, ಆ್ಯಕ್ಟೀವ್ ಆಗ್ಯಾರ್ ನೋಡ್ರಿ...
ಮತ್ತ್ ರಜಾ ದಿನ ಇದ್ರೂ ಸಹಿತ್ ಸರ್ಕಾರಿ ಸೇವೆ ಯಾಕ ಚಾಲೂ ಐತಿ? ಇವತ್ತು ರಜೆ ಇದೆ ಅಲ್ವಾ ಅಂತ ಪಬ್ಲಿಕ್ ನೆಕ್ಸ್ಟ್ ಕೇಳಿದ್ದಕ್ಕೆ ಸಿಬ್ಬಂದಿ ಹೇಳಿದ್ದೇನು ಗೊತ್ತಾ? 'ಕಚೇರಿ ಚಾಲೂ ಐತಿ' ಎಂದಷ್ಟೇ ಮೇಲಾಧಿಕಾರಿಗಳು ಹೇಳಿ ಸೈಲೆಂಟ್ ಆಗಿದ್ದಾರೆ.
ನ್ಯಾಯಮೂರ್ತಿ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಎಲ್ಲಿ ಬರ್ತಾರ ಅಂತ್ಹೇಳಿ ಬರೇ ಆಫೀಸ್ ಅಷ್ಟೇ ಅಲ್ರೀ ಸರ್ಕಾರಿ ದವಾಖಾನಿ ಸಹಿತ್ ಇವತ್ತ್ ಅಲರ್ಟ್ ಆಗೈತಿ.. ನೋಡ್ರಿ ನ್ಯಾಯಮೂರ್ತಿ ಉಪ ಲೋಕಾಯುಕ್ತ ಸಾಹೇಬ್ರ ಅಧಿಕಾರಿಗಳು ಇವತ್ತ್ ಇದ್ದಂಗ್ ಸರ್ಕಾರಿ ಕರ್ತವ್ಯದ ದಿನಾ ಹಿಂಗ್ ಇರ್ಲಿ ಅಂತ್ಹೇಳಿ ಜನಾ ಅಭಿಪ್ರಾಯ ತಿಳಿಸ್ಯಾರ್...
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/11/2024 07:19 pm