ಬೆಂಗಳೂರು: ಉಪಚುನಾವಣೆ ಸೋಲಿಗೆ ತಂದೆ- ಮಗನೇ ಕಾರಣ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಉಪಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿದ ವೇಳೆ ಯತ್ನಾಳ್ ಆರೋಪಕ್ಕೆ ಉತ್ತರಿಸಿದ ಅವರು, ಯಾರೇ ಹಗುರವಾಗಿ ಮಾತಾಡಿದ್ರೂ ಅದನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ರೀತಿ ಮಾತನಾಡಿದರೆ ಕಾರ್ಯಕರ್ತರು ಥೂ ಚೀ ಅಂತ ಉಗಿತಾರೆ ಅಷ್ಟೇ. ನಮ್ದು ರಾಷ್ಟ್ರೀಯ ಪಕ್ಷ, ಅವರು ಕೇಂದ್ರದ ಸಚಿವರಾಗಿದ್ದವರು. ಇನ್ಮೇಲೆ ಆದರೂ ಹಗುರವಾಗಿ ಮಾತಾಡೋದು ನಿಲ್ಲಿಸಲಿ. ಪಕ್ಷ ಸಂಘಟನೆಗೆ ಮನಪೂರ್ವಕವಾಗಿ ಒಳ್ಳೆಯ ಕೆಲಸ ಮಾಡೋದಾದ್ರೆ ಮಾಡ್ಲಿ. ಆದರೆ,
ಈ ರೀತಿ ಹಗುರವಾಗಿ ಮಾತನಾಡುವುದನ್ನು ಯತ್ನಾಳ್ ಬಿಟ್ಟು ಬಿಡಬೇಕು ಎಂದರು.
PublicNext
23/11/2024 06:48 pm