ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಬಸ್‌ಸ್ಟ್ಯಾಂಡ್‌ನಲ್ಲಿ ಚೇರ್ ಹಾಕಿಕೊಂಡು ವಿಜಯೇಂದ್ರ ಭವಿಷ್ಯ ಹೇಳಲಿ - ಮಧು ಬಂಗಾರಪ್ಪ ವ್ಯಂಗ್ಯ

ಶಿವಮೊಗ್ಗ: 3 ಕ್ಷೇತ್ರದ ಉಪ ಚುನಾವಣೆಯ ಗೆಲುವಿನ ನಂತರ ನೂರಕ್ಕೆ ನೂರು ಮತದಾರರು ಸರ್ಕಾರದ ಜೊತೆ ಇದ್ದಾರೆ ಎಂಬುದು ಸಾಬೀತಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿರಂತರವಾಗಿ ಸುಳ್ಳು ಟೀಕೆಗಳನ್ನು ಮಾಡಿ ರಾಜ್ಯದ ಮುಖ್ಯಮಂತ್ರಿಗಳಿಗೆ ಅವಹೇಳನ ಮಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ದುರಂಹಕಾರಕ್ಕೆ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಯತ್ನಾಳ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಯಾಕೆಂದರೆ ವಿಜಯೇಂದ್ರ ಅವರು ಹೊಸ ವರ್ಷಕ್ಕೆ ಹೊಸ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು. ಆದರೆ ಹೊಸ ವರ್ಷಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹೊಸಬರು ಆಯ್ಕೆಯಾಗುತ್ತಾರೆ ಎಂದು ಯತ್ನಾಳ್ ಹೇಳಿದ್ದರು. ವಿಜಯೇಂದ್ರ ಅವರಿಗೆ ಭವಿಷ್ಯ ಹೇಳಿ ಅಭ್ಯಾಸ ಇದೆ. ಅವರಿಗೆ ಯಾವುದಾದರೂ ಬಸ್‌ ಸ್ಟ್ಯಾಂಡ್‌ನಲ್ಲಿ ಚೇರ್ ಹಾಕಿ ಕೊಡೋಣ. ಕುಳಿತುಕೊಂಡು ‌ಭವಿಷ್ಯ ಹೇಳಲಿ. ಚುನಾವಣಾ ಪ್ರಚಾರದ ವೇಳೆ ಮುಡಾ ಹಗರಣ, ವಕ್ಫ್‌ ಹಗರಣ ಅಂತ ವಿಪಕ್ಷದವರು ಭಾಷಣ ಮಾಡಿದ್ರು. ಅವರ ಭಾಷಣಕ್ಕೆ ‌ಮತದಾರರು‌ ಸೊಪ್ಪು ಹಾಕಲಿಲ್ಲ. ಬಿಜೆಪಿ, ಜೆಡಿಎಸ್‌ನವರು ಸ್ವಾರ್ಥಕ್ಕೆ ಸ್ನೇಹ ಮಾಡುವವರು‌ ಅವರ ಸ್ವಾರ್ಥದ ಸ್ನೇಹ ಜನರಿಗೆ ಗೊತ್ತಿದೆ ಎಂದಿದ್ದಾರೆ.

ಇನ್ನು ಉಪಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸ್ಥಾನದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ನಮ್ಮಲ್ಲಿ ಹೈಕಮಾಂಡ್ ಇದೆ. ಆ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

ಅದರಂತೆ, ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಕನ್ನಡ ಬರಲ್ಲ ಅಂತಾರೆ. ಇದೆಲ್ಲಾ ವಿಜಯೇಂದ್ರ ಸ್ಪಾನ್ಸರ್. ಉಪ ಚುನಾವಣೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಿದ್ದೇನೆ. ನಾನು ಯಾವ ಭಾಷೆಯಲ್ಲಿ ಭಾಷಣ ಮಾಡಿದ್ದು ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ.

Edited By : Somashekar
PublicNext

PublicNext

23/11/2024 06:11 pm

Cinque Terre

11.87 K

Cinque Terre

1

ಸಂಬಂಧಿತ ಸುದ್ದಿ