ಚಿತ್ರದುರ್ಗ : ಭ್ರಷ್ಠಾಚಾರ ಮುಕ್ತ ಚಿತ್ರದುರ್ಗವನ್ನಾಗಿ ಮಾಡುವ ಸಲುವಾಗಿ ನವೆಂಬರ್ 26 ರಿಂದ 28ರವರೆಗೆ ಆಮ್ ಆದ್ಮಿ ಪಾರ್ಟಿ ಚಿತ್ರದುರ್ಗ ಘಟಕದವತಿಯಿಂದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಸಮಾಜಿಕ ನ್ಯಾಯ ಸರಿಯಾದ ರೀತಿಯಲ್ಲಿ ಸಿಕ್ಕಲ್ಲ. ಸಂವಿಧಾನದ ಆಶಯಗಳು ಪೂರ್ಣಗೊಂಡಿಲ್ಲ. ಸರ್ಕಾರದ ಸೌಲಭ್ಯಗಳು ಸಿಕ್ಕವರಿಗೆ ಸಿಗುತ್ತಿವೆ. ಬಡವ ಬಡವನಾಗಿಯೇ ಇರುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಇಂದಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ಎನ್ನುವುದು ತುಂಬಿದೆ ಯಾವ ಸರ್ಕಾರಿ ಕಚೇರಿಯಾದರೂ ಸಹಾ ಲಂಚ ಇಲ್ಲದೆ ಕೆಲಸವಾಗುವುದಿಲ್ಲ, ಆಸ್ಪತ್ರೆಯಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ, ಬಡವರು ಚಿಕಿತ್ಸೆಗಾಗಿ ಹೋದರೆ ಲಂಚ ಇಲ್ಲದೆ ಚಿಕಿತ್ಸೆ ಸಿಗುವುದಿಲ್ಲ. ಕಾರ್ಯಾಂಗ ಶಾಸಕಾಂಗ ಭ್ರಷ್ಠಾಚಾರದಿಂದ ಕೊಡಿದೆ. ಇದರಲ್ಲಿ ಮತದಾರನು ಸಹಾ ಭ್ರಷ್ಠಚಾರನಾಗಿದ್ದಾನೆ. ಇವರಿಂದ ಮತವನ್ನು ಖರೀದಿ ಮಾಡಿದ ಚುನಾಯುತ ವ್ಯಕ್ತಿಯೂ ಸಹಾ ಭ್ರಷ್ಠಚಾರನಾಗಿದ್ದಾನೆ ಎಂದು ದೂರಿದರು.
Kshetra Samachara
23/11/2024 06:06 pm