ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಕೇದಾರನಾಥ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಪಕ್ಷದ ಅಭ್ಯರ್ಥಿ ಆಶಾ ನೌಟಿಯಾಲ್ ಅವರು 23,814 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ನೌಟಿಯಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಮನೋಜ್ ರಾವತ್ ಅವರನ್ನು 5,622 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ತ್ರಿಭುವನ್ ಸಿಂಗ್ 9,311 ಮತಗಳನ್ನು ಗಳಿಸಿದ್ದಾರೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಇದು ಬಿಜೆಪಿಗೆ "ದೊಡ್ಡ ಗೆಲುವು" ಎಂದು ಹೇಳಿದ್ದಾರೆ.
PublicNext
23/11/2024 05:46 pm