ಧಾರವಾಡ: ಲೋಕಾಯುಕ್ತ ಸಂಸ್ಥೆಗೆ ಸರ್ಕಾರ ಹೆಚ್ಚಿನ ಅಧಿಕಾರ ಕೊಟ್ಟರೆ ಒಳ್ಳೆಯದಾಗುತ್ತದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ನಾವು ಸರ್ಕಾರಕ್ಕೆ ವರದಿಗಳನ್ನು ಮಾತ್ರ ಕೊಡುತ್ತೇವೆ. ಆದರೆ, ನಮಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ನಾವೇ ತೀರ್ಮಾನಿಸಿ ಕ್ರಮ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ. ಎಲ್ಲೆಲ್ಲಿ ಸರ್ಕಾರಿ ಕೆಲಸಗಳು ವಿಳಂಬ ಆಗುತ್ತಿವೆಯೋ ಅದರ ಬಗ್ಗೆ ವರದಿ ತೆಗೆದುಕೊಂಡು ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ ಎಂದರು.
ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ನಾವು ಹೇಳಬಹುದು. ಕ್ರಮ ತೆಗೆದುಕೊಳ್ಳುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಕ್ರಮ ಕೈಗೊಳ್ಳದಿದ್ದರೆ ಮರಳಿ ಸರ್ಕಾರವನ್ನು ಕೇಳುವಂತೆಯೂ ಇಲ್ಲ. ಸರ್ಕಾರ ನಮಗೆ ಕೊಟ್ಟಿರುವ ಅಧಿಕಾರ ಇಷ್ಟೇ. ಹೆಚ್ಚಿನ ಅಧಿಕಾರ ಕೊಡಿ ಎಂದು ಅನೇಕ ಸಲ ಕೇಳಲಾಗಿದೆ. ಸಂತೋಷ ಹೆಗ್ಡೆ ಸಹ ಅನೇಕ ಸಲ ಕೇಳಿದ್ದರು. ಸರ್ಕಾರ ಕೊಡದಿದ್ದರೆ ನಾವೇನು ಮಾಡಬೇಕು? ಹೆಚ್ಚಿನ ಅಧಿಕಾರಿ ಕೊಡಿ ಎಂದು ನಾವು ಕೇಳಬಹುದಷ್ಟೇ ಆದರೆ, ಒತ್ತಡ ಹೇರುವುದಕ್ಕೂ ನಮಗೆ ಅವಕಾಶ ಇಲ್ಲ. ವರದಿ ಕೊಡುವುದಷ್ಟೇ ನಮ್ಮ ಕೆಲಸ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/11/2024 05:26 pm