ಕೊಡಗು: ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‌ಶಿಪ್‌ನ ಐದನೇ ಸುತ್ತಿನ ಬ್ಲೂ ಬ್ಯಾಂಡ್, ಎಫ್ಎಂ ಎಸ್‌ಸಿಐ, ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‌ಶಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಾಹಕಾರದೊಂದಿಗೆ
ರೋಬಸ್ಟಾ 2024 ರ್‍ಯಾಲಿ ಚಾಂಪಿಯನ್‌ಶಿಪ್‌ಗೆ ಅಮ್ಮತಿಯ ಪ್ರೌಢಶಾಲಾ ಮೈದಾನದಲ್ಲಿ ನಿವೃತ್ತ ಕರ್ನಾಲ್ ಪಟ್ಟಡ ಕರುಂಬಯ್ಯ ಚಾಲನೆ ನೀಡಿದರು.
ಅರ್ಜುನ ಪ್ರಶಸ್ತಿ ವಿಜೇತ ಗೌರವ್ ಗಿಲ್ ಸೇರಿದಂತೆ 60 ಮಂದಿ ರ್‍ಯಾಲಿಪಟುಗಳು ಸ್ಪರ್ಧಾಕಣದಲ್ಲಿ ಸ್ಪರ್ಧಿಸಿದ್ದು, ಕೊಡಗಿನ 6 ಮಂದಿ ಸೇರಿದಂತೆ 7 ಮಹಿಳಾ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಕಡಿದಾದ ರಸ್ತೆಯಲ್ಲಿ ಕಾರು ಚಲಾಯಿಸಲು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ಪಾಂಡಿ, ಗೋವಾ, ಪೂನಾ, ಚಂಡಿಗಡ್, ಕಲ್ಕತ್ತಾ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ರ್‍ಯಾಲಿ ಪಟ್ಟುಗಳು ಕಡಿದಾದ ರಸ್ತೆಯಲ್ಲಿ ರೈಡ್ ನಡೆಸಿದ್ದಾರೆ
ಟಾಟಾ ಸಂಸ್ಥೆಯ ಕಾಫಿ ತೋಟಗಳ ಆನಂದಪುರ, ಪಾಲಿಬೆಟ್ಟ, ಎಮ್ಮೆಗುಂಡಿ,ಹೋಸಳ್ಳಿ, ಮಾರ್ಗೊಳ್ಳಿ, ಭಾಗಗಳಲ್ಲಿ ಸಿದ್ದಗೊಂಡಿರುವ ಒಟ್ಟು 111 ಕಿಲೋ ಮೀಟರ್ ರಸ್ತೆಯಲ್ಲಿ ರ್‍ಯಾಲಿ ಪಟುಗಳು ಕ್ರಮಿಸಲಿದ್ದಾರೆ. ಭಾನುವಾರ ಸಂಜೆ ಶಾಲಾ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
PublicNext
23/11/2024 02:53 pm