ಗದಗ: ಗದಗ ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಸಹ , ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗುತ್ತಿದೆ.
ಪಟ್ಟಣದಲ್ಲಿ ಪುರಸಭೆಯ ಅಧೀನದಲ್ಲಿರುವ ಮಹಾವಿದ್ಯಾಲಯದ ಆಟದ ಮೈದಾನವು ಇಂದು ಕುಡುಕರಿಗೆ ಹೇಳಿ ಮಾಡಿಸಿದ ತಾಣವಾಗಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನಬಹುದು
ಮೈದಾನದಲ್ಲಿ ಆಟವಾಡಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವು ಕ್ರೀಡಾಪಟುಗಳು ಮಿಂಚಿದ್ದಾರೆ. ಸುಮಾರು ೨-೩ ಎಕರೆಗಿಂತಲೂ ಅಧಿಕವಾಗಿರುವ ಈ ಆಟದ ಮೈದಾನವು ಇಂದು ಯಾವುದೇ ಕಾಳಜಿ ಇಲ್ಲದೆ ದಿನದಿಂದ ದಿನಕ್ಕೆ ಕುಡುಕರಿಗೆ ಹೇಳಿ ಮಾಡಿಸಿದ ಆಶ್ರಯ ತಾಣದಂತಾಗಿರುವುದು ದುರ್ದೈವದ ಸಂಗತಿಯಾಗಿದೆ.
ನಿತ್ಯ ಇಲ್ಲಿ ರಾತ್ರಿಯಾಯಿತು ಅಂದರೆ ಸಾಕು ಕುಡುಕರು ತಮಗೆ ಬೇಕಾದ ವಸ್ತುಗಳನ್ನು ತಂದು ಇಲ್ಲಿಯೇ ಕುಡಿದು ಅಲ್ಲಿಯೇ ಬಿಸಾಡುತ್ತಿರುವುದನ್ನು ಕಾಣಬಹುದಾಗಿದೆ.
ಮೈದಾನದಲ್ಲಿ ಎಲ್ಲಿ ನೋಡಿದರೂ ಕುಡಿದು ಎಸೆದು ಹೋಗಿರುವ ಬಾಟಲಿಗಳು, ಸಿಗರೇಟು ಗುಟಕಾ ಪ್ಯಾಕೆಟ್ ಗಳು ಕಾಣಸಿಗ್ತವೆ. ಬಾಟಲಿಗಳನ್ನು ಮೈದಾನದಲ್ಲಿಯೇ ಒಡೆದು ಹಾಕುತ್ತಿರುವುದರಿಂದ ಬರಿಗಾಲಲ್ಲಿ ಇಲ್ಲಿಗೆ ಬಂದರೆ ಗ್ಲಾಸ್ ಚೂರು ಕಾಲಿಗೆ ಚುಚ್ಚಿ ಗಾಯವಾಗುವುದು ಗ್ಯಾರಂಟಿ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಕ್ರೀಡಾಭಿಮಾನಿಗಳ ಆಶಯವಾಗಿದೆ.
-ಸುರೇಶ.ಎಸ್.ಲಮಾಣಿ, ಪಬ್ಲಿಕ್ ನೆಕ್ಸ್ಟ್, ಗದಗ
PublicNext
23/11/2024 02:16 pm