ಬೆಂಗಳೂರು : ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೈಗೆ ಸಿಗದೇ ಅಲ್ಲಿ ಇಲ್ಲಿ ಹೋಗುತ್ತಿರುವವರ ಕಳ್ಳಾಟಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ.
ಸರ್ಕಾರಿ ವೈದ್ಯರಿಗಾಗಿ ಫೇಶ್ಯಿಯಲ್ ಅಟೆಂಡೆನ್ಸ್ ಜಾರಿ ಮಾಡಲು ಇಲಾಖೆ ಪ್ಲಾನ್ ಮಾಡ್ತಿದೆ. ಸರ್ಕಾರಿ ಆಸ್ಪತ್ರೆ ವೈದ್ಯರನ್ನ GPS ಫಾಲೋ ಮಾಡಲಿದೆ. ಕಳ್ಳಾಟ ವಾಡುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಡೆಮುರಿ ಕಟ್ಟಲು ಇಲಾಖೆ ಸಜ್ಜಾಗುತ್ತಿದೆ.
ವೈದ್ಯರು ಆನ್‌ಟೈಮ್ ಬರೋದೇ ಇಲ್ಲ, ಅನ್ನೋದು ಜನರ ಕಂಪ್ಲೇಂಟ್ ಆಗಿತ್ತು. ಲಾಗ್ ಇನ್ ಆಗ್ತಾರೆ ತಮ್ಮ ಪಾಡಿಗೆ ತಾವು ಹೊರಗಡೆ ರೌಂಡ್ಸ್ ಹೋಗ್ತಾರೆ, ಕೆಲವು ವೈದ್ಯರು, ಸಿಬ್ಬಂದಿ ಆಸ್ಪತ್ರೆಗೆ ಬಂದು ಪಂಚ್ ಮಾಡಿ ಬೇರೆ ಆಸ್ಪತ್ರೆಗೆ ಹೋಗೋದು ಕ್ವೈಟ್ ಕಾಮನ್ ಆಗಿ ಹೋಗಿತ್ತು. ಡ್ಯೂಟಿ ಬಿಟ್ಟು ಬೇರೆ ಪರ್ಸನಲ್ ಕೆಲಸದಲ್ಲಿ ಭಾಗಿಯಾಗುವ ಆರೋಪ ಇದೆ. ಹೀಗಾಗಿ ಜನರಿಗೆ ಸರ್ಕಾರಿ ಸೇವೆ ಸಮರ್ಪಕ ಲಭ್ಯತೆಗೆ ಇಲಾಖೆ ಡಿಜಿಟಲ್ ಅಸ್ತ್ರ ಪ್ರಯೋಗ ಮಾಡ್ತಿದೆ...
PublicNext
23/11/2024 02:12 pm