1) ಶಿಗ್ಗಾವಿ ಕ್ಷೇತ್ರದಲ್ಲಿ ರಾಜೀ ರಾಜಕೀಯಕ್ಕೆ ಮುಕ್ತಿ ಹಾಡಿ ಗಂಭೀರವಾಗಿ ಕಾಂಗ್ರೆಸ್ ಚುನಾವಣೆ ಎದುರಿಸಿದ ಹಿನ್ನಲೆ ಪೈಲ್ವಾನ್ ಗೆಲುವು
2) ಸಚಿವ ಸತೀಶ್ ಜಾರಕಿಹೊಳಿ ಶಿಗ್ಗಾವಿಯಲ್ಲೇ ವಸತಿ ಹೂಡಿ ತಮ್ಮದೇ ಚುನಾವಣೆ ಎಂಬಂತೆ ಅಹಿಂದ ಮತದಾರರ ಓಲೈಕೆ ಮಾಡಿದ್ರು
3) ಬಿಜೆಪಿ ನಂಬಿಕೊಂಡಿದ್ದ ಲಿಂಗಾಯತ ಮತದಾರಲ್ಲಿ ಸ್ವಲ್ಪ ಮತದಾರರು ಕೈ ಪರ ಮತ ಚಲಾಯಿಸಿದ ಹಿನ್ನಲೆ ಪಠಾಣ್ ಗೆದ್ದರು
4) ಕಾಂಗ್ರೆಸ್ ಪಡೆ ಶಿಗ್ಗಾವಿಯಲ್ಲಿಯೇ ಬೀಡು ಬಿಟ್ಟು ಕ್ಯಾಂಪೇನ್ ಮಾಡಿದ್ದು ಪಠಾಣ್ ಗೆ ವರವಾಯಿತು
5) ಖಾದ್ರಿ ಮನವೊಲಿಸಿ ಪಠಾಣ್ ಗೆ ಜೋಡು ಮಾಡಿ ಚುನಾವಣೆ ಎದುರಿಸಿದ ಹಿನ್ನಲೆ ಪಠಾಣ್ ಗೆಲುವು ಸುಲಭ ಆಯಿತು
6) ಬಿಜೆಪಿಯ ವಕ್ಪ್ ಅಸ್ತ್ರ ವಿಫಲವಾಯಿತು
7) ಬಸವರಾಜ ಬೊಮ್ಮಾಯಿ ಮೊದಲ ಸಲ ಬಹಳ ಪ್ರಭಲವಾಗಿ ಪ್ರಯೋಗಿಸಿದ್ದ ಹಿಂದುತ್ವ ಅಸ್ತ್ರ ವಿಫಲವಾಯಿತು
8) ಪಂಚಮಸಾಲಿ ಮತದಾರರು ಕೈ ಕಡೆ ವಾಲಿದ್ದು
9) ಪ್ರತಿ ಸಲ ಬೊಮ್ಮಾಯಿ ಪಾಲಾಗ್ತಿದ್ದ 10% ಮುಸ್ಲಿಂ ಮತಗಳೂ ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದ್ದು
10) ಸಿದ್ದರಾಮಯ್ಯ ಅವರನ್ನು ಮೂಡಾ ಹಗರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ಕುರುಬರು ಕೈ ಬಲಪಡಿಸಲು ಮತ್ತೆ ಕೃಪೆ ತೋರಿದರು.
PublicNext
23/11/2024 01:27 pm