ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೆನೆಗುದಿಗೆ ಬಿದ್ದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್- ದಿಟ್ಟ ನಿರ್ಧಾರಕ್ಕೆ ಮುಂದಾದ ಸ್ಮಾರ್ಟ್ ಸಿಟಿ

ಹುಬ್ಬಳ್ಳಿ: ವಾಣಿ==ಜ್ಯನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೀಗಾಗಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತವಾದ ವಾಹನ ನಿಲುಗಡೆಗೆ ಆನುಕೂಲವಾಗುವ ನಿಟ್ಟಿನಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿತ್ತು. ಆದ್ರೆ, ಆ ಯೋಜನೆ ದಶಕ ಕಳೆದ್ರೂ ಸಫಲವಾಗಿಲ್ಲ. ಹೀಗಾಗಿ ಒಂದು ಕಠಿಣ ‌ನಿರ್ಧಾರಕ್ಕೆ ಸ್ಮಾರ್ಟ್ ಸಿಟಿ ಬಂದಿದೆ.

ಹುಬ್ಬಳ್ಳಿಯ ಸಾಯಿಬಾಬಾ ದೇಗುಲದ ಎದುರಿನ ಕೋರ್ಟ್‌ ಸರ್ಕಲ್‌ನಲ್ಲಿ ಬಹುಮಟ್ಟದ ಪಾರ್ಕಿಂಗ್‌ ಕಾಂಪ್ಲೆಕ್ಸ್‌ಗಾಗಿ ಹುಬ್ಬಳ್ಳಿ ನಾಗರಿಕರು ಕಾದು ಕುಳಿತಿದ್ದರು. ಆದ್ರೆ, ಆ ಕನಸು ಕನಸಾಗಿಯೇ ಉಳಿದಿದೆ.‌ ಮಾರ್ಚ್ 2020ರಲ್ಲಿ ಪ್ರಾರಂಭವಾದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣವು ಆಮೆಗತಿಯಲ್ಲಿ ಸಾಗುತ್ತಿದ್ದು, ಪೂರ್ಣಗೊಳ್ಳುವ ಲಕ್ಷಣಗಳು ಮಾತ್ರ ಇನ್ನೂ ಕಾಣುತ್ತಿಲ್ಲ.

ಹೌದು... ಕಳೆದ 14 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ‌ ಕೂಡ ನೆಲ ಬಿಟ್ಟು ಏಳುತ್ತಿಲ್ಲ. ಇದು ಸ್ಮಾರ್ಟ್ ಸಿಟಿ ಯೋಜನೆಗೆ ತೀವ್ರ ಹಿನ್ನೆಡೆಯನ್ನುಂಟು ಮಾಡಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಗುತ್ತಿಗೆದಾರನಿಗೆ ಕೋಟ್ಯಾಂತರ ಹಣ ದಂಡ ಹಾಕಿ ಹಲವು ನೋಟಿಸ್ ನೀಡಿದ್ದಾರೆ. ಈಗ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೊನೆ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದಾರೆ.

ಹುಬ್ಬಳ್ಳಿಯ M/s ಸುರೇಶ್ ಎಂಟರ್‌ಪ್ರೈಸಸ್ ಪ್ರೈವೇಟ್‌ ಲಿಮಿಟೆಡ್ ಗುತ್ತಿಗೆ ಪಡೆದುಕೊಂಡಿದ್ದು, ಅತ್ಯಂತ ಕಳಪೆ ಪ್ರಗತಿ ಇದೆ‌. ಈ ಬಹು ಮಹಡಿ‌ ಕಟ್ಟಡದ ಒಂದು ಸೇಫ್ ಲೆವೆಲ್ ಬರುವವರೆಗೂ ಗುತ್ತಿಗೆ ರದ್ದು ಮಾಡಲು ಸಾಧ್ಯವಾಗಿಲ್ಲ. ಈ‌ ಕುರಿತಂತೆ ‌ಬೋರ್ಡ್ ಮಟ್ಟದಲ್ಲಿ ‌ಚರ್ಚೆ ಆಗಿದೆ. ಈ‌ ಕಟ್ಟಡ ಅತ್ಯಂತ ‌ಮಹತ್ವದ ಜಾಗದಲ್ಲಿ ಇರುವುದರಿಂದ ಗುತ್ತಿಗೆ ರದ್ದು‌‌ಮಾಡಿದ್ರೆ ಡೇಂಜರ್ ಪಾಯಿಂಟ್ ಆಗುವ ಭೀತಿ ಇದೆ.

ಹೀಗಾಗಿ ‌ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರಿಗೆ 2 ಕೋಟಿ 70 ಲಕ್ಷ ದಂಡ ಹಾಕಿ ಕಾಮಗಾರಿ ಕೂಡಲೇ ಮುಂದುವರೆಸುವಂತೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೆ ಶೇ. 25ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಸಾಕಷ್ಟು ನೋಟಿಸ್ ಕೂಡ ಜಾರಿ ಮಾಡಲಾಗಿದೆ.

Edited By : Shivu K
Kshetra Samachara

Kshetra Samachara

23/11/2024 12:51 pm

Cinque Terre

22.67 K

Cinque Terre

4

ಸಂಬಂಧಿತ ಸುದ್ದಿ