ಧಾರವಾಡ: ಧಾರವಾಡದ ನಿಸರ್ಗ ಲೇಔಟ್‍ನ ನಿವಾಸಿ ಮಕ್ಸುದ್ ಜವಳಿ ಅನ್ನುವವರು ಬೆಂಗಳೂರಿನಲ್ಲಿ ಖರೀದಿಸಿದ ಪ್ಲ್ಯಾಟ್‍ನ ಗೃಹ ಪ್ರವೇಶಕ್ಕಾಗಿ ಹುಬ್ಬಳ್ಳಿಯ ರಾಯಲ್ ಓಕ್‍ರವರಿಂದ ರೂ.2,00,000 ಮೊತ್ತದ ಸೋಫಾ ಹಾಗೂ ಇತ್ಯಾದಿ ಗೃಹ ಉಪಯೋಗದ ಪೀಠೋಪಕರಣಗಳನ್ನು ಖರೀದಿಸಿದ್ದರು.
ಎರಡು ಲಕ್ಷ ಮೊತ್ತದ ಫರ್ನಿಚರ್ ಖರೀದಿಸಿದರೆ ಸುಮಾರು 35 ಸಾವಿರ ರೂಪಾಯಿ ಕಿಮ್ಮತ್ತಿನ ಎರಡು ರಿಕ್ಲೈನರ್ ಸೋಫಾ ಚೇರಗಳನ್ನು ಉಡುಗರೆ ರೂಪದಲ್ಲಿ ಕೊಡುವುದಾಗಿ ರಾಯಲ್ ಓಕ್‍ನವರು ಒಪ್ಪಿಕೊಂಡಿದ್ದರು. ಈ ಬಗ್ಗೆ ದೂರುದಾರ 2 ಲಕ್ಷ ಹಣಅವರಿಗೆ ಸಂದಾಯ ಮಾಡಿದ್ದರು.
ಬೆಂಗಳೂರಿನ ಪ್ಲ್ಯಾಟಿನ ಗೃಹ ಪ್ರವೇಶ ದಿ: 09/10/2022 ರಂದು ನಿಗದಿಯಾಗಿತ್ತು. ಅಂದು ಉಡುಗರೆಯ ಚೇರ ಸಮೇತ ಎಲ್ಲ ಫರ್ನಿಚರ್‌ಗಳನ್ನು ಹೊಸ ಪ್ಲ್ಯಾಟಿಗೆ ತಂದು ಕೊಡುವುದಾಗಿ ರಾಯಲ್ ಓಕನವರು ಒಪ್ಪಿಕೊಂಡಿದ್ದರು.
ಆದರೆ ನಿಗದಿತ ಸಮಯಕ್ಕೆ ಎಲ್ಲ ಫರ್ನಿಚರಗಳನ್ನು ಪ್ಲ್ಯಾಟ್‌ನ ಗೃಹ ಪ್ರವೇಶಕ್ಕೆ ಎದುರುದಾರರು ಕೊಡಲಿಲ್ಲ. 2 ಲಕ್ಷರೂಪಾಯಿ ಮೌಲ್ಯದ ಫರ್ನಿಚರ್‌ಗಳ ಪೈಕಿ ಕೇವಲ ರೂ.1,31,000 ಮೊತ್ತದ ಅರ್ಧ ಫರ್ನಿಚರಗಳನ್ನು ಮಾತ್ರ ಗ್ರಹ ಪ್ರವೇಶದ ದಿನ ಮದ್ಯಾಹ್ನ ಕೊಟ್ಟಿದ್ದರು. ಈ ರೀತಿ ನಿಗದಿತ ಸಮಯದ ಒಳಗೆ ಪೂರ್ತಿ ಫರ್ನಿಚರ್‌ಗಳನ್ನು ಎದುರುದಾರ ರಾಯಲ್ ಓಕನವರು ಕೊಡದೇ ಇದ್ದುದ್ದರಿಂದ ತನ್ನ ಗೃಹ ಪ್ರವೇಶದ ಕಾರ್ಯಕ್ರಮವನ್ನು ದೂರುದಾರರು ಮುಂದೂಡಿದ್ದರು.
ಎದುರುದಾರರ ಈ ನಡಾವಳಿಕೆ ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಹುಬ್ಬಳ್ಳಿ ರಾಯಲ್ ಓಕ್‍ರವರ ಮೇಲೆ ಕಾನೂನು ಕ್ರಮ ಜರಗಿಸುವಂತೆ ಕೋರಿದೂರುದಾರ ದಿ:06/05/2024 ರಂದು ಧಾರವಾಡ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರ ಬೆಂಗಳೂರಿನ ತನ್ನ ಪ್ಲ್ಯಾಟ್‌ನ ಗೃಹ ಪ್ರವೇಶದ ನಿಮಿತ್ಯಎರಡು ಲಕ್ಷ ರೂಪಾಯಿ ಹಣ ಖರ್ಚು ಮಾಡಿ ತನಗೆ ಬೇಕಾದ ಫರ್ನಿಚರಗಳನ್ನು ಎದುರುದಾರ/ ರಾಯಲ್ ಓಕ್‍ರವರಿಂದ ಖರೀದಿಸಿದ್ದಾರೆ.
ಗೃಹ ಪ್ರವೇಶದ ದಿನಾಂಕದೊಳಗಾಗಿ ಆ ಎಲ್ಲ ಫರ್ನಿಚರಗಳನ್ನು ಮತ್ತು ಉಡುಗೊರೆಯ ಚೇರಗಳನ್ನು ದೂರುದಾರರಿಗೆ ತಲುಪಿಸುವುದಾಗಿ ಎದುರುದಾರ ಒಪ್ಪಿಕೊಂಡಿರುತ್ತಾರೆ. ಆದರೇ ನಿಗಧಿತ ಸಮಯಕ್ಕೆ ಆ ಎಲ್ಲ ಪೀಠೋಪಕರಣಗಳನ್ನು ಎದುರುದಾರರು ಒದಗಿಸದಿರುವುದರಿಂದ ದೂರುದಾರ ತನ್ನ ಗೃಹ ಪ್ರವೇಶದ ಕಾರ್ಯಕ್ರಮವನ್ನು ಮುಂದೂಡಬೇಕಾಯಿತು. ಎದುರುದಾರ/ ರಾಯಲ್ ಓಕರವರ ಇಂತಹ ನಡಾವಳಿಕೆ ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರರಿಂದ ಬಾಕಿ ಉಳಿಸಿಕೊಂಡ ರೂ.66,628/- ಮತ್ತು ಅದರ ಮೇಲೆ ಶೇ.8% ರಂತೆ ದಿ:01/10/2022 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಸಮೇತ ಲೆಕ್ಕ ಹಾಕಿ ಕೊಡುವಂತೆ ಎದುರುದಾರ/ಹುಬ್ಬಳ್ಳಿಯ ರಾಯಲ್ ಓಕ್‍ರವರಿಗೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರರು 50 ಸಾವಿರ ರೂಪಾಯಿ ಪರಿಹಾರ ಮತ್ತು 10 ಸಾವಿರ ಪ್ರಕರಣದಖರ್ಚು ವೆಚ್ಚ ಕೊಡುವಂತೆ ಆಯೋಗ ರಾಯಲ್ ಓಕರವರಿಗೆ ನಿರ್ದೇಶಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/11/2024 12:06 pm