ಮಂಗಳೂರು: ನಗರದ ಹೊರವಲಯ ಕುತ್ತಾರು ಬಳಿ ಇಂದು ಜೆಸಿಬಿ ಘರ್ಜನೆ ಜೋರಾಗಿತ್ತು. ಯೆನೆಪೋಯ ಆಸ್ಪತ್ರೆಯಿಂದ ಕುತ್ತಾರು ಜಂಕ್ಷನ್ ವರೆಗೆ ಪಿಡಬ್ಲ್ಯುಡಿ ಇಲಾಖೆಯಿಂದ, ಅನಧಿಕೃತವಾಗಿ ಹಾಕಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು.
ಮೂರು ಬಾರಿ ನೋಟಿಸ್ ನೀಡಿದರೂ ಗೋಡೆಗಳಿಗೆ ಅಂಟಿಸಿದ್ರೂ ಕೂಡ ಅಕ್ರಮವಾಗಿ ಅಂಗಡಿಗಳನ್ನು ಮತ್ತೆ ಹಾಕಿದ್ದಾರೆ ಎಂದು ಪಿಡಬ್ಲ್ಯುಡಿ ಅಧಿಕಾರಿಗಳು ಹೇಳಿದ್ರು.
ಈ ಸಂದರ್ಭದಲ್ಲಿ ನೋಟಿಸ್ ನೀಡದೇ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಂಗಡಿಗಳ ಮಾಲಕರು ಅಧಿಕಾರಿಗಳ ಜೊತೆಗೆ ವಾಗ್ವಾದ, ಮಾತಿನ ಚಕಮಕಿ ನಡೆಸಿದರು.
ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
Kshetra Samachara
23/11/2024 11:39 am