ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೌರಕಾರ್ಮಿಕರಿಂದ ಪ್ರತಿಭಟನೆ - ವೇತನ, ಇತರೆ ಭತ್ಯೆ ಸಂದಾಯಕ್ಕೆ ಆಗ್ರಹ

ರಬಕವಿ-ಬನಹಟ್ಟಿ: ತೇರದಾಳ ಪುರಸಭೆ ಮುಂಭಾಗದಲ್ಲಿ ಸ್ಥಳೀಯ ಪೌರಕಾರ್ಮಿಕರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಅನಿರ್ದಿಷ್ಟಾವಧಿ ಹೋರಾಟವನ್ನು ಪ್ರಾರಂಭಿಸಿದ್ದಾರೆ.

ಪೌರಕಾರ್ಮಿಕ ಸ್ಥಳೀಯ ಸಂಘಟನೆ ಅಧ್ಯಕ್ಷ ರಘು ಗೊಟಡಕಿ, ದಯಾನಂದ ಮಾಂಗ, ಮಂಜುನಾಥ ರಾಯಣ್ಣವರ ಒತ್ತಾಯಿಸಿ, ಕಳೆದ ನಾಲ್ಕು ತಿಂಗಳಿಂದ ವೇತನ ಇಲ್ಲ, ಸರ್ಕಾರದ ಯೋಜನೆಗಳಾದ ಶೇ 17ರ ವೇತನ, ಗಳಿಕೆ ರಜೆ, 21 ದಿನದ ಭತ್ಯೆ, ಸಂಕಷ್ಟ ಭತ್ಯೆ(ಎನ್.ಪಿ,ಎಸ್ ತುಂಬುವ), ದೀಪಾವಳಿ ಬೊನಸ್ ಸೇರಿದಂತೆ ವೇತನ ಹಾಗೂ ಇನ್ನಿತರ ಭತ್ಯೆ ಕೊಡಮಾಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಈ ಕುರಿತಂತೆ ಮಾನ್ಯ ಜಿಲ್ಲಾಧಿಕಾರಿಗಳು, ಯೋಜನಾ ಅಧಿಕಾರಿ(ಪಿಡಿ), ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರುವುದಿಲ್ಲ ಕಾರಣ ನಮ್ಮ ಕುಟುಂಬಗಳು ಸಾಲದ ಹೊರೆಯಿಂದ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಬೇಡಿಕೆ ಈಡೆರಿರುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಸಂಜು ಹಟ್ಟೆನ್ನವರ, ಶಂಭು ಮಾಸ್ತಿ, ದಯಾನಂದ ಮಾಂಗ, ಗೌರವ್ವ ಮಾಸ್ತಿ, ಸಾವಿತ್ರಿ ರಾಯನ್ನವರ ಸೇರಿದಂತೆ ಎಲ್ಲಾ ಪೌರಕಾರ್ಮಿಕರು ಇದ್ದರು.

ಈ ಕುರಿತಂತೆ ಪುರಸಭೆ ಅಧ್ಯಕ್ಷೆ ಶಿಲ್ಪಾ ರೋಡಕರ ಪ್ರತಿಕ್ರಿಯಿಸಿ, ಪೌರಕಾರ್ಮಿಕರು ನಮ್ಮೂರಿನ ಸ್ವಚ್ಛತೆ ಮಾಡುವ ಪುರಸಭೆಯ ಪ್ರಮುಖ ಸೇವಕರಾಗಿದ್ದಾರೆ. ಹಾಗಾಗಿ ಅವರಿಗೆ ಸರಿಯಾದ ವೇತನ ಸಿಗಬೇಕಾಗಿದೆ. ಆದರೆ ಸ್ಥಳೀಯ ಸಂಸ್ಥೆಗಳಿಂದ ವೇತನ ಕೊಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ವಾರ್ಷಿಕವಾಗಿ ಬರುವ ಆದಾಯವು 2 ಕೋಟಿ 12 ಲಕ್ಷ ಆಗಿದ್ದರೇ, 2 ಕೋಟಿ 7 ಲಕ್ಷ ಖರ್ಚು ಇರುವುದರಿಂದ ಮತ್ತು ಮಂಟೆನನ್ಸಗಾಗಿ 2 ಕೋಟಿಯಷ್ಟು ಖರ್ಚು ಇದೆ. ಆದಕಾರಣ ರಾಜ್ಯಸರ್ಕಾರವು ಪೌರಕಾರ್ಮಿಕರ ವೇತನವನ್ನು ನೇರವಾಗಿ ಪಾವತಿಸುವ ವ್ಯವಸ್ಥೆ ಮಾಡಬೇಕಾಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

22/11/2024 10:58 pm

Cinque Terre

1.32 K

Cinque Terre

0