ಚಳ್ಳಕೆರೆ: ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಕೋಶಾಧ್ಯಾಕ್ಷ ಜ್ಞಾನೇಶ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರ ಪಹಣಿಯಲ್ಲಿ ಅಧಿಕಾರಿಗಳ ತಪ್ಪಿನಿಂದ ಹೆಸರು ತಪ್ಪಾದರೆ ವರ್ಷಗಟ್ಟೆಲೆ ಕಚೇರಿಗೆ ಅಲೆದಾಡಿ ನ್ಯಾಯಾಲಯದ ಮೆಟ್ಟಿಲೇರುವ ಸ್ಥಿತಿಯಲ್ಲೂ ಪೂರ್ವಜರ ರೈತರ ಹೆಸರಿಗಿರುವ ಜಮೀನನ್ನು ರಾತ್ರೋ ರಾತ್ರಿ ವಕ್ಫ್ ಬೋರ್ಡ್ ಹೆಸರು ಬದಲಾಯಿ ರೈತರ ಆಸ್ತಿ ಕಬಳಿಸುವುದನ್ನು ಕೈಬಿಡ ಬೇಕು ವಕ್ಟ್ ಬೋರ್ಡ್ ರದ್ದಾಗ ಬೇಕು ರೈತರ ಮಠಾದೀಶರ ಆಸ್ತಿ ಉಳಿಸ ಬೇಕು. ಇದನ್ನು ವಿರೋಧಿಸಿ ನವೆಂಬರ್ 25ರಂದು ಜಿಲ್ಲಾ ಕೇಂದ್ರ ಹಾಗೂ 26 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಕಿಸಾನ್ ರೈತ ಸಂಘದಿಂದ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಲು ಮುಂದಾಗಿದ್ದೇವೆ ಎಂದರು.
Kshetra Samachara
22/11/2024 10:04 pm