ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಎನ್ ಕೌಂಟರ್ ಪ್ರಕರಣ ತನಿಖೆ- ಪೊಲೀಸ್ ಠಾಣೆಗೆ ಮಲೆಕುಡಿಯ ಸಂಘಟನೆ ಮುತ್ತಿಗೆ

ಹೆಬ್ರಿ: ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡನನ್ನು ಕಳೆದ ಸೋಮವಾರ ಹೆಬ್ರಿ ಸಮೀಪದ ಪೀತಬೈಲುವಿನ ಮನೆಯೊಂದರಲ್ಲಿ ಎನ್ ಕೌಂಟರ್ ಮಾಡಲಾಗಿತ್ತು. ಪೀತಬೈಲಿನ ಆ ಮನೆ ಜಯಂತ ಗೌಡ ಎಂಬವರಿಗೆ ಸೇರಿದ್ದಾಗಿತ್ತು. ಘಟನೆ ನಡೆದ ದಿವಸ ಜಯಂತ ಗೌಡ ಕುಟುಂಬ ಸಮೇತ ಬೇರೆ ಕಡೆಯಲ್ಲಿದ್ದರು. ಆದರೆ, ಈಗ ಮನೆ ಮಾಲೀಕ ಜಯಂತ ಗೌಡರನ್ನು ಹೆಬ್ರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದು ಮಲೆಕುಡಿಯ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಹೆಬ್ರಿ ಠಾಣೆಗೆ ಮುತ್ತಿಗೆ ಹಾಕಿದ ಮಲೆಕುಡಿಯ ಸಂಘಟನೆ ಸದಸ್ಯರು ಜಯಂತ್ ಗೌಡರನ್ನು ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದರು. ಒತ್ತಾಯಕ್ಕೆ ಮಣಿದ ಹೆಬ್ರಿ ಪೊಲೀಸರು ಜಯಂತ್ ಗೌಡರನ್ನು ಬಿಡುಗಡೆ ಮಾಡಿದ್ದಾರೆ. ಅಂದಹಾಗೆ, ನಕ್ಸಲ್ ನಿಗ್ರಹ ಪಡೆ ಪೊಲೀಸರು ಎನ್ ಕೌಂಟರ್ ನಡೆಸಿದ ಪ್ರಕರಣದ ತನಿಖೆಯನ್ನು ಈಗ ಹೆಬ್ರಿ ಪೊಲೀಸರು ಮಾಡುತ್ತಿದ್ದಾರೆ.

Edited By : Vinayak Patil
PublicNext

PublicNext

22/11/2024 09:35 pm

Cinque Terre

9.87 K

Cinque Terre

1

ಸಂಬಂಧಿತ ಸುದ್ದಿ