ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ : 'ಮಂಗನಕಾಯಿಲೆ ಬಾರದಂತೆ ಮುಂಜಾಗ್ರತೆ ವಹಿಸೋಣ' - ತಹಶೀಲ್ದಾರ್ ಎಂ ಆರ್ ಕುಲ್ಕರ್ಣಿ

ಸಿದ್ದಾಪುರ : ಮಂಗನಕಾಯಿಲೆಯಿಂದ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಕಾಯಿಲೆಯ ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಎಲ್ಲ ಇಲಾಖೆಯವರು ಕಾಯಿಲೆ ಹರಡದಂತೆ ಹಾಗೂ ನಿಯಂತ್ರಣಕ್ಕೆ ತಕ್ಷಣವೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಎಂ ಆರ್ ಕುಲ್ಕರ್ಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಮಂಗನಕಾಯಿಲೆ ಜಾಗ್ರತಿ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಗಗಳು ಸತ್ತರೆ ಮಾಹಿತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳ ಫೋನ್ ನಂಬರ್ ಗಳನ್ನು ಸಾರ್ವಜನಿಕರಿಗೆ ನೀಡಬೇಕು, ಮಂಗನ ಕಾಯಿಲೆ ಕಂಡು ಬರಬಹುದಾದಂತ ಸ್ಥಳದ ಶಾಲೆ, ಅಂಗನವಾಡಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಣ ಎಲೆಗಳನ್ನ ತೆರವು ಮಾಡಿ ಸ್ವಚ್ಛ ಗೊಳಿಸಬೇಕು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು, ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಿದಾಗ ಕಾಯಿಲೆಯಿಂದ ದೂರ ಇರಲು ಸಾಧ್ಯವಾಗುತ್ತದೆ, ಕಾಯಿಲೆ ತಡೆಗಟ್ಟಲು ಎಲ್ಲ ಇಲಾಖೆಯವರ ಸಹಕಾರ ಮುಖ್ಯ, ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದ ಅವರು ಮಂಗನ ಕಾಯಿಲೆಗೆ ಸಂಬಂಧ ಪಟ್ಟಂತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ, ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದರು.

Edited By : PublicNext Desk
Kshetra Samachara

Kshetra Samachara

22/11/2024 08:31 pm

Cinque Terre

2.66 K

Cinque Terre

0

ಸಂಬಂಧಿತ ಸುದ್ದಿ