ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

ಮುಲ್ಕಿ: ಅಪಘಾತ ವಲಯವೆಂದೇ ಪ್ರಸಿದ್ಧಿ ಪಡೆದಿರುವ ಮುಲ್ಕಿ ಹೆದ್ದಾರಿ ಬಸ್ ನಿಲ್ದಾಣದ ಜಂಕ್ಷನ್ ಬಳಿ ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿ ಹೋಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಚಾಲಕ ಮುಲ್ಕಿ ಜಂಕ್ಷನ್ ಹೆದ್ದಾರಿ ಪ್ರವೇಶಿಸುತ್ತಿದ್ದಂತೆ ಏಕಾಏಕಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಆಟೋ ಜೊತೆಗಿನ ಅಪಘಾತವನ್ನು ಸಮಯಪ್ರಜ್ಞೆಯಿಂದ ತಪ್ಪಿಸಿದ್ದಾನೆ.

ಈ ಸಂದರ್ಭ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು ಲಾರಿ ತೀರಾ ಎಡಬದಿಗೆ ಚಲಿಸಿ ಹೆದ್ದಾರಿ ಬದಿಯ ಡಿವೈಡರ್ ಮೇಲೇರಿ ಭಾರೀ ಶಬ್ಧದೊಂದಿಗೆ ನಿಂತಿದೆ. ಆದರೆ ಆಟೋ ಚಾಲಕ ಇದನ್ನೆಲ್ಲಾ ಪರಿಗಣಿಸದೆ ಸೀದಾ ಅಲ್ಲಿಂದ ತೆರಳಿದ್ದಾನೆ. ಭಾರೀ ದುರಂತ ತಪ್ಪಿಸಿದ ಲಾರಿ ಚಾಲಕನ ವಿಡಿಯೋ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಕಳೆದ ವರ್ಷಗಳ ಹಿಂದೆ ಇದೇ ರೀತಿ ಅಪಘಾತ ತಪ್ಪಿಸಲು ಯತ್ನಿಸಿ ಲಾರಿ ಡಿವೈಡರ್ ಮೇಲೇರಿ ಬಳಿಕ ಸರ್ವಿಸ್ ರಸ್ತೆಯಲ್ಲಿ ಚಲಿಸಿ ಪ್ರಾಣ ಹಾನಿ ಸಂಭವಿಸಿತ್ತು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಮುಲ್ಕಿ ಬಸ್ ನಿಲ್ದಾಣ, ಬಪ್ಪನಾಡು, ವಿಜಯ ಸನ್ನಿಧಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದು ಹೆದ್ದಾರಿ ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Vinayak Patil
PublicNext

PublicNext

22/11/2024 07:58 pm

Cinque Terre

42.61 K

Cinque Terre

9

ಸಂಬಂಧಿತ ಸುದ್ದಿ