ಚಿಕ್ಕಮಗಳೂರು: ನಗರದ ಹಿರೇಮಗಳೂರಿನ 66/11 ಕೆ.ವಿಯ ವಿದ್ಯುತ್ ವಿತರಣಾ ಕೇಂದ್ರದ ತೃತೀಯ ತ್ರೈಮಾಸಿಕ ನಿರ್ವಹಣೆಯನ್ನು ನವೆಂಬರ್ 23 (ನಾಳೆ ಶನಿವಾರ) ಹಮ್ಮಿಕೊಂಡಿರುವುದರಿಂದ ಹಿರೇಮಗಳೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆ.ವಿ ಪಟ್ಟಣ ಮತ್ತು ಗ್ರಾಮೀಣ ಫೀಡರ್ಗಳಿಗೆ ಒಳಪಡುವ ಪ್ರದೇಶಗಳಾದ ಹೌಸಿಂಗ್ ಬೋರ್ಡ್, ಮಾರ್ಕೇಟ್ ರೋಡ್, ಐ.ಜಿ. ರೋಡ್, ಆಜಾದ್ ಪಾರ್ಕ್, ವಿಜಯಪುರ, ಗೌರಿ ಕಾಲುವೆ, ಕೆಂಪನಹಳ್ಳಿ ಟೌನ್, ಸಿ.ಡಿ.ಎ ಲೇಔಟ್, ಬೈಪಾಸ್ ರಸ್ತೆ, ಬೇಲೂರು ರಸ್ತೆ, ಹಿರೇಮಗಳೂರು ಟೌನ್ ಮತ್ತು 11 ಕೆವಿ ಗ್ರಾಮೀಣ ಫೀಡರ್ಗಳಿಗೆ ಒಳಪಡುವ ಲಕ್ಷ್ಮೀ ಪುರ ಇಂಡಸ್ಟ್ರಿಯಲ್, ಲಕ್ಯಾ, ಉದ್ದೇಬೋರನಹಳ್ಳಿ, ದತ್ತ ಪೀಠ, ಕೆಂಗೇನನಹಳ್ಳಿ, ಹಿರೇಕೊಳಲೆ, ಮೂಗ್ತಿಹಳ್ಳಿ, ಜೋಳ್ದಾಳ್, ಶಿರವಾಸೆ, ವಸ್ತಾರೆ, ಕುರವಂಗಿ, ಚಿಕ್ಕನಹಳ್ಳಿ, ಮಾಗಡಿ, ಕೆ.ಆರ್ ಪೇಟೆ. ಅಂಬಳೆ ಇಂಡಸ್ಟ್ರಿಯಲ್ ಪ್ರದೇಶಗಳಿಗೆ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
22/11/2024 06:38 pm