ನರಗುಂದ : ತಾಲ್ಲೂಕಿನ ಬನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪಡಿತರ ವಿತರಣೆ ಕೇಂದ್ರದಲ್ಲಿ ಕಳಪೆ ಮಟ್ಟದ ಜೋಳ ವಿತರಣೆ ಮಾಡಿದ್ದು ಕಂಡು ಬಂದಿದೆ, ಇದರಿಂದ ಸಾರ್ವಜನಿಕರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನರಗುಂದ ತಾಲ್ಲೂಕಿನ ಇನ್ನು ಹಲವು ಗ್ರಾಮಗಳಲ್ಲಿ ಕಳಪೆ ಮಟ್ಟದ ಜೋಳ ವಿತರಣೆ ಮಾಡಲಾಗುತ್ತಿದೆ. ಆದ್ದರಿಂದ ತಾಲ್ಲೂಕು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು, ಕಳಪೆ ಮಟ್ಟದ ಜೋಳ ತಿಂದು ಆಸ್ಪತ್ರೆ ಸೇರಬೇಕಾಗುತ್ತೆ, ಈ ತರಹದ ಕಳಪೆ ಮಟ್ಟದ ಜೋಳ ನೀಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆ. ಆರ್. ಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ವೀರನಗೌಡ ಮುಗನೂರು ಆಗ್ರಹಸಿದ್ದಾರೆ.
ಮಲ್ಲಿಕಾರ್ಜುನ ಪಬ್ಲಿಕ್ ನೆಕ್ಸ್ಟ್ ನರಗುಂದ
Kshetra Samachara
22/11/2024 04:07 pm