ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : 'ಗ್ಯಾರಂಟಿಗಳ ಹೊರೆ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೆರಳು ತೋರಬೇಡಿ' - ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ

ಹುಬ್ಬಳ್ಳಿ : ರಾಜ್ಯ ಸರ್ಕಾರ ಗ್ಯಾರೆಂಟಿಗಳಿಂದ ನುಣಿಚಿಕೊಳ್ಳಲು BPL ಕಾರ್ಡ ಪರಿಷ್ಕರಣೆಗೆ ಮುಂದಾಗಿ, ಈಗ ಕೇಂದ್ರ ಸರ್ಕಾರದ ಮಾನದಂಡದ ನೆಪ ಹೇಳುವುದು ತರವಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ಷೇಪಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ, ಗ್ಯಾರಂಟಿಗಳ ಹೊರೆ ತಪ್ಪಿಸಿಕೊಳ್ಳಲು ಕೇಂದ್ರದತ್ತ ಬೆರಳು ತೋರಬೇಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದರು. ಬಿಪಿಎಲ್ ಕಾರ್ಡಗಳಿಗೆ ಕೇಂದ್ರದಿಂದ ಮಾನದಂಡ ವಿಧಿಸಿ ಬಹಳ ದಿನಗಳೇ ಆಗಿವೆ. ಆದರೆ, ಇಷ್ಟು ದಿನ ಬಿಟ್ಟು ಈಗೇಕೆ? ಎಂದು ಪ್ರಶ್ನಿಸಿದ ಸಚಿವರು, ರಾಜ್ಯ ಸರ್ಕಾರ ಬಡವರ ಅನ್ನದ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದರು.

ರಾಜ್ಯ ಸರ್ಕಾರಕ್ಕೆ ಈಗ ಜ್ಞಾನೋದಯ ಆಗಿದೆಯೇ? ಕೇಂದ್ರ ಸರ್ಕಾರ ಬಹು ಹಿಂದೆಯೇ BPL ಮಾನದಂಡ ವಿಧಿಸಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಪ್ರಸ್ತುತ ಗ್ಯಾರಂಟಿ ಯೋಜನೆಗಳ ಹೊರೆ ಬಿದ್ದಿದೆ. ಗ್ಯಾರೆಂಟಿಗಳ ಬಿಸಿ ತಟ್ಟಿದ್ದರಿಂದ ಈಗ ಜ್ಞಾನೋದಯ ಆಗಿದೆ. ಹಾಗಾಗಿ 'ಕೇಂದ್ರ ಮಾನದಂಡ' ಎಂಬ ನೆಪ ಹೇಳುತ್ತಿದೆ ಎಂದು ಜೋಶಿ ಟೀಕಿಸಿದರು.

ಭಾರತೀಯ ನೀತಿ ಆಯೋಗದ ಪ್ರಕಾರ ದೇಶಾದ್ಯಂತ 25 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿವೆ. ಅದರ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ಬಿಪಿಎಲ್ ಮಾನದಂಡ ವಿಧಿಸಿದೆ ನಿಜ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ನುಣಿಚಿಕೊಳ್ಳಲಿ ಎಂದಲ್ಲ ಎಂದು ಹೇಳಿದರು.

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಯಾವತ್ತೂ ಬಡವರ ಪರ ಚಿಂತನೆ ಉಳ್ಳದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಬಡವರ ಹಿತ ಮರೆತು ಕೇಂದ್ರದ ಮಾನದಂಡ ಎಂಬ ಸಬೂಬು ಹೇಳುತ್ತ ಅರ್ಹ ಬಿಪಿಎಲ್ ಕುಟುಂಬಗಳನ್ನೂ ವಂಚಿಸಲು ಹೊರಟಿದೆ ಎಂದು ಆರೋಪಿಸಿದರು. ಇನ್ನೂ ಕರ್ನಾಟಕದಲ್ಲಿ ಶೇ.80ರಷ್ಟು ಬಿಪಿಎಲ್ ಕಾರ್ಡಗಳಿವೆ ಎಂದು ರಾಜ್ಯ ಆಹಾರ ಖಾತೆ ಸಚಿವ ಮುನಿಯಪ್ಪ ಹೇಳಿದ್ದಾರೆ. ಆದರೆ, ಸರ್ಕಾರ ಸರಿಯಾಗಿ ಸಮೀಕ್ಷೆ ನಡೆಸಲಿ ಎಂದು ಜೋಶಿ ಸಲಹೆ ನೀಡಿದರು.

Edited By : Abhishek Kamoji
PublicNext

PublicNext

22/11/2024 03:49 pm

Cinque Terre

49.68 K

Cinque Terre

3

ಸಂಬಂಧಿತ ಸುದ್ದಿ