ಹೈದರಾಬಾದ್ : ಹುಟ್ಟುಹಬ್ಬದ ದಿನವೇ ಬಂದೂಕಿನಿಂದ ಗುಂಡು ಮಿಸ್ ಫೈರ್ ಆಗಿ 23 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.
ತೆಲಂಗಾಣದ 23 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹುಟ್ಟುಹಬ್ಬದಂದು ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿಸಿ ಸಾವನ್ನಪ್ಪಿದ್ದಾನೆ. ಈ ಘಟನೆ ನವೆಂಬರ್ 13ರಂದು ನಡೆದಿದೆ. ತೆಲಂಗಾಣದ ಉಪ್ಪಲ್ ಮೂಲದ ಆರ್ಯನ್ ರೆಡ್ಡಿ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.
ಆರ್ಯನ್ ತಮ್ಮ ಹುಟ್ಟುಹಬ್ಬದಂದು ಬಂದೂಕನ್ನು ಬಳಸುವಾಗ ಆಕಸ್ಮಿಕವಾಗಿ ಬಂದೂಕು ಸ್ಫೋಟಗೊಂಡ ನಂತರ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಗುಂಡೇಟಿನ ಶಬ್ದ ಕೇಳಿ, ಮತ್ತೊಂದು ಕೋಣೆಯಲ್ಲಿ ಕುಳಿತಿದ್ದ ಆತನ ಸ್ನೇಹಿತರು ಓಡಿ ಬಂದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ನೇಹಿತನನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಆರ್ಯನ್ ಯುಎಸ್‌ನಲ್ಲಿ ಬೇಟೆ ಬಂದೂಕು ಪರವಾನಗಿ ಪಡೆದಿದ್ದ ಎಂದು ವರದಿಗಳು ತಿಳಿಸಿವೆ. ಯುವಕನ ಪಾರ್ಥಿವ ಶರೀರ ಇಂದು ರಾತ್ರಿ ತೆಲಂಗಾಣಕ್ಕೆ ಆಗಮಿಸುವ ನಿರೀಕ್ಷೆಯಿದೆ.
PublicNext
22/11/2024 01:48 pm