ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ರೇಷನ್ ಕಾರ್ಡ್ ರದ್ದು, ಫಲಾನುಭವಿಗಳ ಗೋಳಾಟ

ಗದಗ: ಪೇರಲೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬದ ಬಿಪಿಎಲ್, ರೇಷನ್ ಕಾರ್ಡ್ ರದ್ದು ಮಾಡಿರುವುದರಿಂದ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಫಲಾನುಭವಿ ಪರದಾಟ ಪಡುವಂತಾಗಿದೆ.

ಹೌದು ಹಣ್ಣು ಮಾರಾಟ ಮಾಡಿ ತಮ್ಮ ಕುಟುಂಬದ ಹೊಟ್ಟೆ ತುಂಬಿಸುವ ಹಾಸೀಮ್ ಅಲಿ ಹಾಗೂ ಬೀಬಿಹಜರಾ ದಂಪತಿ ಬಿಪಿಎಲ್ ಕಾರ್ಡು ರದ್ದು ಆಗಿರುವುದರಿಂದ ಪರದಾಟ ನಡೆಸುತ್ತಿದ್ದಾರೆ. ತಮ್ಮ ಸ್ವಂತ ಮನೆ ಬಿದ್ದಿರುವುದರಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ರೇಷನ್ ಕಾರ್ಡ್ ರದ್ದು ಆಗಿರುವುದರಿಂದ ಸರಕಾರದಿಂದ ಬರುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಾವು ಸರಕಾರಕ್ಕೆ ಯಾವುದೇ ಟ್ಯಾಕ್ಸ್ ಕಟ್ಟುವುದಿಲ್ಲ. ಆದ್ರೂ ನಮ್ಮ ರೇಷನ್ ಕಾರ್ಡ್ ರದ್ದು ಮಾಡಿದ್ದಾರೆ. ಬಡವರಿಗಾಗಿ ಅನ್ನಭಾಗ್ಯ ಯೋಜನೆ ತಂದಿದ್ದೀರಿ. ಆದ್ರೆ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಸರಕಾರ ಮಾಡುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆದಷ್ಟು ಬೇಗನೆ ಸರಕಾರ ಎಚ್ಚೆತ್ತಕೊಂಡು ರೇಷನ್ ಕಾರ್ಡ್ ಮರಳಿ ನೀಡುವಂತೆ ಒತ್ತಾಯಿಸಿದರು.

ಸುರೇಶ ಎಸ್.ಲಮಾಣಿ ಪಬ್ಲಿಕ್ ನೆಕ್ಸ್ಟ್ ಗದಗ

Edited By : Suman K
Kshetra Samachara

Kshetra Samachara

22/11/2024 01:40 pm

Cinque Terre

15.7 K

Cinque Terre

0

ಸಂಬಂಧಿತ ಸುದ್ದಿ