ಕಾರವಾರ : ಗೋವಾ ಮದ್ಯವನ್ನು ಖಾಸಗಿ ಬಸ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ಇಲಾಖೆ ತಪಾಸಣೆ ನಡೆಸಿ ವಶಕ್ಕೆ ಪಡೆದಿದೆ.
ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ (KA 64 1554) ಹೆಸರಿನ ಖಾಸಗಿ ಬಸ್
ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಣೆಗೆ ಒಳಪಡಿಸಿದಾಗ ಬಸ್ ನಲ್ಲಿ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಗೋವಾ ಮದ್ಯ ಇರುವುದು ಪತ್ತೆಯಾಗಿದೆ.
ಬಸ್ ನಲ್ಲಿ 73.500 ಲೀಟರ್ ಗೋವಾ ಮದ್ಯ ಹಾಗು 3.9 ಲೀಟರ್ ಬೀಯರ್ ಇತ್ತು. ಇದರ ಅಂದಾಜು ಮೊತ್ತ 92,220 ರೂ. ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಲಕ್ಷ ರೂ. ಮೌಲ್ಯದ ಬಸ್ ಜಪ್ತು ಮಾಡಲಾಗಿದೆ. ವಶಪಡಿಸಿಕೊಂಡ ಮದ್ಯ ಮತ್ತು ಬಸ್ ನ ಮೌಲ್ಯ ಒಟ್ಟು 26 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗ ರವರ ನಿರ್ದೇಶನ ಹಾಗೂ ಅಬಕಾರಿ ಉಪ ಆಯುಕ್ತ ಕಾರವಾರ ಅವರ ಮಾರ್ಗದರ್ಶನದಲ್ಲಿ ಮತ್ತು ಅಬಕಾರಿ ಉಪ ಅಧಿಕ್ಷಕ ಕಾರವಾರ ರವರ ನೇತೃತ್ವದಲ್ಲಿ ಗುರುವಾರ ಸಂಜೆ 5:30 ಗಂಟೆಯ ಸುಮಾರಿಗೆ ಕಾರ್ಯಾಚರಣೆ ನಡೆಸಲಾಗಿದೆ. ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
Kshetra Samachara
22/11/2024 12:42 pm