ನವದೆಹಲಿ : ಶತಕೋಟಿ ಡಾಲರ್ ಲಂಚ ಮತ್ತು ವಂಚನೆ ಪ್ರಕರಣದಲ್ಲಿ ಗೌತಮ್ ಅದಾನಿ ವಿರುದ್ಧ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಇನ್ನೂ ಗೌತಮ್ ಅದಾನಿ ಸೇರಿದಂತೆ ಎಂಟು ಜನರ ವಿರುದ್ಧ ಅಮೆರಿಕದಲ್ಲಿ ಲಂಚದ ಆರೋಪಗಳು ದಾಖಲಾಗಿವೆ.
ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿಗೆ ನ್ಯೂಯಾರ್ಕ್ನ ಡಿಸ್ಟ್ರಿಕ್ಟ್ ಕೋರ್ಟ್ವೊಂದು ಅರೆಸ್ಟ್ ವಾರಂಟ್ ಹೊರಡಿಸಿದೆ. ಕೆಲವೇ ವರ್ಷಗಳ ಹಿಂದೆ ಇದೇ ಅಮೆರಿಕದ ಶಾರ್ಟ್ಸೆಲ್ಲರ್ ಸಂಸ್ಥೆಯಾದ ಹಿಂಡನ್ಬರ್ಗ್ ಅದಾನಿ ಗ್ರೂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು. ಆ ಘಟನೆಯಲ್ಲಿ ಅದಾನಿಯ ಸ್ಟಾಕ್ಗಳು ಬಹುತೇಕ ನೆಲಕಚ್ಚಿದವು. ಈಗಲೂ ಕೂಡ ಎರಡು ವರ್ಷಗಳಾದರೂ ಅದಾನಿ ಷೇರುಗಳು ತಮ್ಮ ಗರಿಷ್ಠ ಮಟ್ಟಕ್ಕೆ ಬರಲಾಗಿಲ್ಲ. ಆದರೂ ಗೌತಮ್ ಅದಾನಿ ಬಿಸಿನೆಸ್ಗಳನ್ನು ಬೆಳೆಸುತ್ತಾ ಹೋಗಿದ್ದಾರೆ.
ಈಗ ಅಮೆರಿಕದ ಜಸ್ಟಿಸ್ ಡಿಪಾರ್ಟ್ಮೆಂಟ್ ಮತ್ತು ಎಸ್ಇಸಿ ಗೌತಮ್ ಅದಾನಿಯನ್ನು ಟಾರ್ಗೆಟ್ ಮಾಡಿವೆ. ಮೇಲ್ನೋಟಕ್ಕೆ ಇದು ಅಮೆರಿಕದ ಕಾನೂನು ಪ್ರಕಾರ ತೆಗೆದುಕೊಳ್ಳಲಾಗುತ್ತಿರುವ ಕ್ರಮವೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ, ಕೆಲ ವರದಿಗಳು ಈ ಬೆಳವಣಿಗೆಯ ಹಿಂದೆ ಒಂದು ದೊಡ್ಡ ಪಿತೂರಿಯನ್ನು ಶಂಕಿಸಿವೆ. ಭಾರತ ಮತ್ತು ಅದಾನಿ ಬೆಳವಣಿಗೆ ಸಹಿಸದ ಶಕ್ತಿಗಳು ಈ ಪಿತೂರಿಯ ಹಿಂದಿರಬಹುದು.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರಲು ಜನವರಿಯವರೆಗೆ ಕಾಯಬೇಕು. ಅಲ್ಲಿಯವರೆಗೆ ಜೋ ಬೈಡನ್ ಅವರೇ ಆಡಳಿತದಲ್ಲಿರುತ್ತಾರೆ. ಇನ್ನು ಒಂದೂವರೆ ತಿಂಗಳಷ್ಟೇ ಅವರಿಗೆ ಅಧಿಕಾರ ಇರುವುದು. ಇಷ್ಟರೊಳಗೆ ಅವರು ಡೊನಾಲ್ಡ್ ಟ್ರಂಪ್ ಅವರ ಅಧಿಕಾರದ ಹಾದಿಯನ್ನು ಕಠಿಣವಾಗಿಸಲು ಬೇಕಾದ ಎಲ್ಲಾ ತಂತ್ರಗಳನ್ನೂ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದರ ಭಾಗವಾಗಿ ಅದಾನಿ ವಿರುದ್ಧ ಮಸಲತ್ತು ನಡೆಯುತ್ತಿರಬಹುದು ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲೇ ಸೌರ ವಿದ್ಯುತ್ ತಯಾರಿಕೆ ಆಗುವಂತೆ ಪ್ಲ್ಯಾನ್ ಮಾಡಿದ್ದಾರೆ. ಅದಾನಿ ಗ್ರೂಪ್ ಈಗಾಗಲೇ ಅಮೆರಿಕದಲ್ಲಿ ರಿನಿವಬಲ್ ಎನರ್ಜಿ ಪ್ರಾಜೆಕ್ಟ್ಗಳಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕದಲ್ಲಿ ಸೌರ ವಿದ್ಯುತ್ ಉತ್ಪಾದನೆಯ ಮಹತ್ವದ ಗುತ್ತಿಗೆಗಳನ್ನು ಅದಾನಿ ಗ್ರೂಪ್ಗೆ ಕೊಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬೈಡನ್ ಸರ್ಕಾರ ಈಗಲೇ ಅದಾನಿಗೆ ಭ್ರಷ್ಟಾಚಾರದ ಮಸಿ ಮೆತ್ತಿ, ಅವರ ಹಾದಿಗೆ ತೊಡರುಗಳನ್ನು ನಿರ್ಮಿಸುವ ಪ್ರಯತ್ನ ಮಾಡಿರಬಹುದು ಎನ್ನುವ ಶಂಕೆ ಇದೆ.
ಈ ಅನುಮಾನಕ್ಕೆ ಪುಷ್ಟಿ ಕೊಡುವ ಸಂಗತಿ ಎಂದರೆ, ಬೈಡನ್ ಸರ್ಕಾರ ನಾಲ್ಕೈದು ವರ್ಷ ಯಾಕೆ ಸುಮ್ಮನಿತ್ತು ಎಂಬುದು.
PublicNext
22/11/2024 08:31 am