ರಬಕವಿ-ಬನಹಟ್ಟಿ:
ಮಹಾಲಿಂಗಪೂರ ದ ಬಸವನಗರದಲ್ಲಿ ಸಿ.ಎಂ.ಹುರಕಡ್ಲಿ ಫೌಂಡೇಷನ್ ಆಶ್ರಯದಲ್ಲಿ16ನೇ ವರ್ಷದ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಾಗೂ ಕನ್ನಡಕ ಕೊಡಮಾಡುವ ಕಾರ್ಯಕ್ರಮವನ್ನು ರಬಕವಿಯ ಗುರುಸಿದ್ದೇಶ್ವರ ಶ್ರೀ, ಜಗದ್ಗುರು ಶಿವಶಂಕರ ಶಿವಾಚಾರ್ಯರು ಚಾಲನೆ ನೀಡಿ, ಮಾತನಾಡಿ, ಶರೀರಕ್ಕೆ ಕಣ್ಣು ಮುಖ್ಯವಾದ ಅಂಗ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಹುರಕಡ್ಲಿ ಕುಟುಂಬದ ಸೇವೆಯು ಅಮೂಲ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಚನ್ಮಬಸು ಹುರಕಡ್ಲಿ, ಡಾ.ಎಂ.ಎಂ.ಜೋಶಿ ಸೇರಿದಂತೆ ವೈದ್ಯರು, ನೇಕಾರ ಮುಖಂಡ ಶಿವಲಿಂಗ ಟಿರಕಿ ಹಾಗೂ ಸ್ಥಳೀಯ ಮುಖಂಡರು ಇದ್ದರು. ನಾಲ್ಕು ನೂರರಷ್ಟು ಜನರಿಗೆ ತಪಾಸಣೆ ನಡೆಯಿತು.
Kshetra Samachara
21/11/2024 09:03 pm