ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ವಕ್ಫ್ ಆಸ್ತಿ ವಿವಾದ - ನವೆಂಬರ್ 21 ರಂದು ಬಿಜೆಪಿ ಪ್ರತಿಭಟನೆ - ಅರುಣ ಕುಮಾರ ಪೂಜಾರ

ಹಾವೇರಿ : ರಾಜ್ಯದ ಹಲವೆಡೆ ರೈತರ ಜಮೀನುಗಳು, ಮಠಗಳು ಹಾಗೂ ಮನೆಗಳ ಪಹಣಿ ಪತ್ರಗಳಲ್ಲಿ ವಕ್ಫ್ ಬೋರ್ಡ್ ಅಂತಾ ನಮೂದು ಮಾಡಿರುವುದನ್ನು ವಿರೋಧಿಸಿ ನವಂಬರ್ 21 ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದ್ದಾರೆ.

ನವಂಬರ್ 21 ರಂದು ನಡೆಯುವ ಪ್ರತಿಭಟನೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ,‌ ಹಲವು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಅರುಣಕುಮಾರ್ ತಿಳಿಸಿದರು.

ವಕ್ಫ್ ಆಸ್ತಿ ಎಂದು ನಮೂದು ಮಾಡಿರುವ ರಾಜ್ಯ ಸರಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುವುದು. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಇದರಿಂದ ರೈತರು, ಮಠಗಳ ಆಸ್ತಿಗಳು ವಕ್ಫ್ ಬೋರ್ಡ್ ಪಾಲಾಗುತ್ತಿವೆ ಎಂದು ಪೂಜಾರ್ ಆರೋಪಿಸಿದರು.

Edited By : PublicNext Desk
PublicNext

PublicNext

19/11/2024 07:24 pm

Cinque Terre

22.48 K

Cinque Terre

0