ಹುಬ್ಬಳ್ಳಿ: ಅದು ಚಿಕ್ಕ ಕುಟುಂಬ. ಆ ಕುಟುಂಬದ ತಾಯಿ ತಂದೆ ಅನಕ್ಷರಸ್ಥರು. ಆದ್ರೆ ಅವರ ಪುಟ್ಟ ಮಗಳು ಅದ್ಭುತ ಪ್ರತಿಭೆಯನ್ನು ಹೊಂದಿ, ಚಿಕ್ಕ ವಯಸ್ಸಿನಲ್ಲೇ ಅಮೋಘ ಸಾಧನೆ ಮಾಡುತ್ತಿದ್ದಾಳೆ.
ಎಸ್. ಹೀಗೆ ಕ್ಯಾಮೆರಾ ಮುಂದೆ ಪಿಳಿಪಿಳಿ ಕಣ್ಣು ಬಿಡುತ್ತಾ ನೋಡುತ್ತಿರುವ ಈ ಬಾಲೆ ಕವನಾ ಕುರಿ ಅಂತ. ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದ ಬಸವರಾಜ, ಯಶೋಧಾ ದಂಪತಿ ಮುದ್ದಿನ ಮಗಳು. ಚಿಕ್ಕ ವಯಸ್ಸಿನಲ್ಲೇ ಚಟಪಟ ಅಂತ ಕೇಳಿದ ಪ್ರಶ್ನೆಗೆ ಥಟ್ಟ ಅಂತ ಉತ್ತರ ಕೊಡುತ್ತಾಳೆ. ಅಂಗನವಾಡಿಯಲ್ಲಿ ಓದುತ್ತಿರುವಾಗಲೇ ಈಕೆ ವಿಶ್ವದ ಜ್ಞಾನವನ್ನು ತಲೆಯಲ್ಲಿ ತುಂಬಿಕೊಂಡಿದ್ದಾಳೆ. 200ರಿಂದ 300ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಥಟ್ಟನೆ ಉತ್ತರ ಕೊಡುತ್ತಾಳೆ. ತಂದೆ ತಾಯಿ ಅನಕ್ಷರಸ್ಥರಾಗಿದ್ದರು ಮಗಳು ಮಾತ್ರ ಅಕ್ಷರವನ್ನು ಅರಗಿಸಿಕೊಂಡಿದ್ದಾಳೆ. ಮನೆಯಲ್ಲಿ ಯಾವುದೇ ಸೌಕರ್ಯ ಇಲ್ಲದಿದ್ದರೂ ಓದಿನಲ್ಲಿ ಮಾತ್ರ ಈ ಬಾಲಕಿ ಮುಂದಿದ್ದಾಳೆ.
ಇನ್ನು ಮಗಳ ಸಾಧನೆ ಕಂಡು ತಂದೆ ತಾಯಿ ಬಹಳ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಕಡುಬಡತನ ಈ ಬಾಲೆಯ ಸಾಧನೆಗೆ ರಾಜ್ಯಾದ್ಯಂತ ಪ್ರಶಸ್ತಿಗಳು ಸನ್ಮಾನ ಅರಸಿಕೊಂಡು ಬರುತ್ತಿವೆ. ಕೇವಲ ಅರ್ಧ ಎಕರೆ ಜಮೀನಿನಲ್ಲೇ ನಿತ್ಯ ಜೀವನ ನಡೆಸುವ ಬಡ ಕುಟುಂಬದಲ್ಲಿ ಈ ಹೂವು ಅರಳುತ್ತಿದೆ. ತಂದೆ ಬಸವರಾಜ್ ಕುರಿ ಕೂಲಿ ಕೆಲಸ ಮಾಡಿದರೆ, ತಾಯಿ ಯಶೋಧ ಮನೆಯಲ್ಲಿ ಇದ್ದುಕೊಂಡು ಮಗಳ ಸಾಧನೆಗೆ ಸಹಾಯ ಮಾಡುತ್ತಿದ್ದಾರೆ. ಇನ್ನು, ಮಗಳ ಸಾಧನೆ ಕಂಡು ಕವನಾಳ ತಾಯಿ ಏನು ಹೇಳುತ್ತಾರೆ ನೀವೇ ಕೇಳಿ.
ಬಡತನವನ್ನು ಮೀರಿ ಬಾಲೆ ಅದ್ಭುತ ಸಾಧನೆ ಮಾಡುತ್ತಿದ್ದಾಳೆ. ಕವನಾ ಎಂಬ ಈ ಬಾಲೆಯ ಸಾಧನೆಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಮುಡಿಗೇರಿವೆ. ಎಲೆಮರಿ ಕಾಯಿಯಂತೆ ಇರುವ ಬಾಲಕಿಯನ್ನು ಸರ್ಕಾರ, ನಮ್ಮ ಜನಪ್ರತಿನಿಧಿಗಳು ಗುರುತಿಸಿ ಇನ್ನಷ್ಟು ಸಾಧನೆ ಮಾಡಲು ಸಹಾಯ ಮಾಡಬೇಕಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/11/2024 04:47 pm