ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಕಾಡಿನಲ್ಲಿ ನಕ್ಸಲ್‌ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ : ಶಿವಮೊಗ್ಗದಲ್ಲೂ ಕೇಸುಗಳು ದಾಖಲು

ಶಿವಮೊಗ್ಗ : ಮಹತ್ವದ ಬೆಳವಣಿಗೆಯಲ್ಲಿ ಉಡುಪಿ ಕಾಡಿನಲ್ಲಿ ನಕ್ಸಲ್‌ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ ಆಗಿದ್ದಾನೆ. ಕಳೆದ ಕೆಲ ದಿನಗಳಿಂದ ಹೆಬ್ರಿ, ಶೃಂಗೇರಿ ಭಾಗದಲ್ಲಿ ನಕ್ಸಲರ ಚಲನವಲನದ ಬಗ್ಗೆ ಎಎನ್‌ಎಫ್‌ಗೆ ಮಾಹಿತಿ ಲಭ್ಯವಾಗಿತ್ತು. ಈ ನಡುವೆ ANF ತಂಡ ನಿನ್ನೆ ನಡೆಸಿದ್ದ ಕೂಂಬಿಂಗ್‌ ವೇಳೆ ವಿಕ್ರಂಗೌಡ ನೇತೃತ್ವದ ನಕ್ಸಲ್‌ ತಂಡ ಮುಖಾಮುಖಿಯಾಗಿದ್ದು, ಪೊಲೀಸರು ವಿಕ್ರಂ ಗೌಡನನ್ನು ಎನ್ ಕೌಂಟರ್ ಮಾಡಿದ್ದಾರೆ.

ಹೆಬ್ರಿ ವ್ಯಾಪ್ತಿಯಲ್ಲಿ ಪೀತೆ ಬೈಲ್‌ ಎಂಬಲ್ಲಿ ಘಟನೆ ನಡೆದಿದ್ದು, ವಿಕ್ರಂ ಗೌಡ ಮೂಲತಃ ಹೆಬ್ರಿಯವನಾಗಿದ್ದಾನೆ. ಶೃಂಗೇರಿ, ಕಾರ್ಕಳ ಭಾಗದಲ್ಲಿ ಸಕ್ರಿಯನಾಗಿದ್ದ ಈತ, ಕೇರಳದಲ್ಲಿ ನಕ್ಸಲ್‌ ಚಟುವಟಿಕೆಗೆ ಬಿಗಿ ಮಾಡಿದ ಬಳಿಕ ನಕ್ಸಲ್‌ ಟೀಂ ಕರ್ನಾಟಕಕ್ಕೆ ವಾಪಸ್‌ ಆಗಿತ್ತು.

ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಡಗಾರು ಲತಾ ಓಡಾಟ ನಡೆಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಬೆಳವಣಿಗೆ ಬಳಿಕ ಇದೀಗ ವಿಕ್ರಂಗೌಡ ಪೊಲೀಸ್‌ ಶೂಟೌಟ್‌ನಲ್ಲಿ ಎನ್‌ಕೌಂಟರ್‌ ಆಗಿದ್ದಾನೆ.

ಇನ್ನು ವಿಕ್ರಂ ಗೌಡ ವಿರುದ್ಧ ಶಿವಮೊಗ್ಗದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಹಾಗೂ ಆಗುಂಬೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ 2009, 2012 ಹಾಗೂ 2016 ರಲ್ಲಿ ಹಾಗೂ ತೀರ್ಥಹಳ್ಳಿಯಲ್ಲಿ 2007 ರಲ್ಲಿ UAPA ಕಾಯ್ದೆಯಡಿ ಪ್ರಕರಣ ದಾಖಲಾಗಿವೆ. ಮಲೆನಾಡು ಭಾಗದ ಗ್ರಾಮಗಳಲ್ಲಿ ಬೆದರಿಕೆ ಪೋಸ್ಟರ್ ಹಚ್ಚುವುದು, ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬಗ್ಗೆ ವಿಕ್ರಂ ಗೌಡ ವಿರುದ್ಧ ಕೇಸು ದಾಖಲಾಗಿದ್ದವು.

ಇನ್ನು ಇದೀಗ ಶೂಟೌಟ್ ಬೆನ್ನಲ್ಲೇ ಶಿವಮೊಗ್ಗದ ಆಗುಂಬೆ ಸೇರಿದಂತೆ, ಮಲೆನಾಡಿನ ಹೊಸನಗರ ಭಾಗದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಕೂಂಬಿಂಗ್ ಕಾರ್ಯಾಚರಣೆ ಜೊತೆಗೆ, ಪೊಲೀಸರ ನಾಕಾಬಂಧಿ, ಪೆಟ್ರೋಲಿಂಗ್ ಮುಂದುವರೆದಿದೆ.

Edited By : Nirmala Aralikatti
Kshetra Samachara

Kshetra Samachara

19/11/2024 01:08 pm

Cinque Terre

4.9 K

Cinque Terre

0

ಸಂಬಂಧಿತ ಸುದ್ದಿ