ಶಿವಮೊಗ್ಗ : ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಹಲವು ಅನಾಹುತಗಳು ಉಂಟಾಗಿದೆ. ಇದೀಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸನಗರ- ಸಾಗರ ರಸ್ತೆಯ ಪುರಪ್ಪೆಮನೆ ಭಾಗದ ಅಪ್ಪೆಮನೆ ಗ್ರಾಮದ ರಸ್ತೆ ಭಾಗದಲ್ಲಿ ಮಳೆಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ಧರೆ ಕುಸಿತವಾಗಿದೆ. ಇದರಿಂದಾಗಿ ದಲಿತ ಕಾಲೋನಿಗೆ ಸಂಪರ್ಕಿಸುವ ಸಿಮೆಂಟ್ ರಸ್ತೆ ಬಿರುಕು ಮೂಡಿದೆ.
ಅಪ್ಪೆ ಮನೆ ಗ್ರಾಮದ ರಸ್ತೆ ಇದಾಗಿದ್ದು ಸಮಾರು 900 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದ ರಸ್ತೆ ಬಿಳಗೋಡಿ, ತಾರನಬೈಲು,ಹುಣಸೆ ಕೊಪ್ಪಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಈ ರಸ್ತೆಯ ಒಂದು ಭಾಗ ಬಿರುಕು ಬಿಟ್ಟಿದ್ದು ಪಕ್ಕದಲ್ಲಿರುವ ಧರೆ ಕುಸಿತವಾಗಿದೆ. ಹೆಚ್ಚಿನ ಮಳೆಯಾದರೇ ನೀರು ಹೆಚ್ಚಾಗಿ ಹರಿದು ಬಂದು ಕುಸಿತ ಹೆಚ್ಚಾಗಲಿದ್ದು, ಯಾವ ಸಂದರ್ಭದಲ್ಲಾದರೂ ರಸ್ತೆ ಕುಸಿಯುವ ಹಂತದಲ್ಲಿದೆ.
ಪ್ರತಿನಿತ್ಯ ನೂರಾರು ಜನ ಈ ರಸ್ತೆ ಮೂಲಕ ಸಾಗರ ಹಾಗೂ ಇತರೆ ಭಾಗಕ್ಕೆ ಸಂಚರಿಸುತ್ತಾರೆ. ಸಂಚಾರದ ಸಂದರ್ಭದಲ್ಲಿ ಕುಸಿದರೆ ಸಾವು-ನೋವುಗಳಾಗುವ ಸಾಧ್ಯತೆಗಳಿವೆ. ಹೀಗಾಗಿ ರಸ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸಿ ನೀರು ಸರಾಗವಾಗಿ ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಹಾಗೂ ಗ್ರಾ.ಪಂ.ಗೆ ಮನವಿ ಮಾಡಿದ್ದು, ಎಸ್.ಡಿ.ಆರ್.ಎಫ್ ನಿಧಿಯಿಂದಲಾದರೂ ತಡೆಗೋಡೆ ನಿರ್ಮಿಸಿ ಅಂತಾ ಮನವಿ ಮಾಡಿಕೊಂಡಿದ್ದಾರೆ.
PublicNext
18/11/2024 04:30 pm