ಚಿತ್ರದುರ್ಗ: ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು, ಅನರ್ಹರು ಯಾರಿದ್ದಾರೆ ಅವರ ಕಾರ್ಡ್ ಮಾತ್ರ ರದ್ದಾಗುತ್ತದೆ ಎಂದು ಹೇಳಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಚಿತ್ರದುರ್ಗದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತಾಡಿ, ಈ ಬಗ್ಗೆ ಬಿಜೆಪಿ- ಜೆಡಿಎಸ್ ನವರು ಗುಲ್ಲೆಬ್ಬಿಸಿದ್ದಾರೆ. ಅನರ್ಹರಲ್ಲೂ ಬಿಪಿಎಲ್ ಕಾರ್ಡ್ ಇದ್ದು, ಅವುಗಳನ್ನು ಮಾತ್ರ ರದ್ದು ಮಾಡುತ್ತೇವೆ ಎಂದರು.
ಬಿಜೆಪಿಯವರಿಗೆ ಮಾಡಲು ಏನೂ ಕೆಲಸವಿಲ್ಲ, ದಿನಕ್ಕೊಂದು ಗುಲ್ಲೆಬ್ಬಿಸುತ್ತಾರೆ. ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ಶಾಸಕರ ಖರೀದಿಗೆ ಆಮಿಷ ನೀಡಿರುವ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಜಮೀರ್ ಅಹಮದ್ ಹೇಳಿಕೆ ವಿಚಾರ ಮುಗಿದು ಹೋದ ಅಧ್ಯಾಯ. ಜಮೀರ್ ಅಹಮದ್ ಹೇಳಿಕೆಯಿಂದ ಮೈನಸ್ ಮತ್ತು ಪ್ಲಸ್ ಆಗಿರಬಹುದು ಎಂದು ಅಭ್ಯರ್ಥಿಯೇ ಹೇಳಿದ್ದಾರೆ. ನೋಡೋಣ, ಇನ್ನು ಹತ್ತು ದಿನ ಅಷ್ಟೆ ಬಾಕಿ ಇದೆ, ಫಲಿತಾಂಶಕ್ಕೆ ಎಂದರು.
PublicNext
18/11/2024 03:33 pm