ಚಿಕ್ಕಮಗಳೂರು : ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಮುಡಾ ಹಗರಣ ಹಾಗೂ ಜಿ ಟಿ ದೇವೇಗೌಡ ಸಂಬಂಧಿಗೆ ಎರಡು ಸೈಟ್ ಬದಲಿಗೆ 19 ಸೈಟ್ ನೀಡಿರುವ ವಿಚಾರ ಕುರಿತು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಗೆದಷ್ಟು ಮೊಗೆದಷ್ಟು ಮತ್ತಷ್ಟು ಎಂಬಂತೆ ಮುಡಾ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮುಖ್ಯಮಂತ್ರಿಗಳ ಸ್ವಕ್ಷೇತ್ರ ಸ್ವಜಿಲ್ಲೆಯಲ್ಲೇ ಹಗರಣ ನಡೆದಿದೆ. ದೊಡ್ಡ ಪ್ರಮಾಣದಲ್ಲಿ ಹಗರಣ ಹಾಗೂ ಅಡ್ಜಸ್ಟ್ಮೆಂಟ್ ರಾಜಕಾರಣ ನಡೆಯುತ್ತಿದೆ ಇದಕ್ಕೆಲ್ಲ ಮೂಲ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಆರೋಪಿಸಿದರು.
ಈ ಹಗರಣದ ಬಗ್ಗೆ ಇನ್ನಷ್ಟು ಆಳವಾಗಿ ತನಿಖೆಯಾಗಲಿ ಹಾಗೂ ಎಲ್ಲಾ ವಿಷಯಗಳು ಸಾರ್ವಜನಿಕರಿಗೆ ಗೊತ್ತಾಗಲಿ ಎಂದಿದ್ದಾರೆ, ಅಲ್ಲದೇ ವಕ್ಫ್ ಕಾಂಗ್ರೆಸ್ ಜಮೀನು ಮಠ ಮಂದಿರ, ಕ್ರಿಶ್ಚಿಯನ್ ಚರ್ಚ್ಗಳಿಗೂ ಬರುತ್ತೆ ಎಲ್ಲವೂ ಹೋಗ್ಬೇಡ ಆಸ್ತಿ ಅಂತ ಬರ್ತಾರೆ ಅವರ ಬುಡಕ್ಕೆ ಬಂದಾಗ ಅರಿವಾಗುವುದು ಎಂದಿದ್ದಾರೆ.
PublicNext
16/11/2024 08:03 pm