ಚಿತ್ರದುರ್ಗ: ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಸರಕಾರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ತರಗತಿ ಮುಂಭಾಗ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಒಳಭಾಗದ ನರ್ಸಿಂಗ್ ಕಾಲೇಜ್ ನಲ್ಲಿ 240 ವಿದ್ಯಾರ್ಥಿಗಳಿಗೆ ಎರಡೇ ಕ್ಲಾಸ್ ರೂಮ್ ಇದ್ದು, ಎರಡು ಬ್ಯಾಚ್ ಪ್ರಾಯೋಗಿಕ ತರಗತಿಗೆ ಹೋದ್ರೆ, ಇನ್ನೆರಡು ಬ್ಯಾಚ್ ಕ್ಲಾಸಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯ, ಲೈಬ್ರರಿ, ಕ್ಲಾಸ್ ರೂಮ್ ಇಲ್ಲ ಅಂತಾ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಸರ್ಜನ್ ಗಮನಕ್ಕೆ ತಂದ್ರೂ ಡಾ. ರವೀಂದ್ರ ಸ್ಪಂದಿಸುತ್ತಿಲ್ಲ. ಸಮಸ್ಯೆ ಅಂತ ಹೇಳಿದ್ರೆ ಜಿಲ್ಲಾ ಸರ್ಜನ್ ಧಮ್ಕಿ ಹಾಕ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
PublicNext
16/11/2024 07:31 pm