ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ : ಮಕ್ಕಳಿಗೆ ಆತ್ಮರಕ್ಷಣೆ ಕಲೆಯ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು... ಬಿಂಬಾ ಕೆ.ಆರ್

ಸಾಗರ : ಮಕ್ಕಳಿಗೆ ಆತ್ಮರಕ್ಷಣೆ ಕಲೆಯ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು. ಶಿಕ್ಷಣದ ಜೊತೆಗೆ ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳುವ ಕಲೆ ಕಲಿತರೆ ಹೆಚ್ಚು ಉಪಯುಕ್ತ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯೆ ಬಿಂಬಾ ಕೆ.ಆರ್. ತಿಳಿಸಿದರು.

ಇಲ್ಲಿನ ಸಾಗರ ಕರಾಟೆ ತರಬೇತಿ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.

ಆರಂಭದಲ್ಲಿ ಎಲ್ಲ ಕಲೆಯನ್ನು ಕಲಿಯುವುದು ಕಷ್ಟ ಎನಿಸುತ್ತದೆ. ಆದರೆ ಅದು ಭವಿಷ್ಯದಲ್ಲಿ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ನಾವು ಕಲಿತ ಕಲೆ ನಮ್ಮಲ್ಲಿ ಮಾತ್ರ ಉಳಿಸಿ ಕೊಳ್ಳದೆ ಅದನ್ನು ಇನ್ನೊಬ್ಬರಿಗೆ ಕಲಿಸುವ ಕೆಲಸವಾಗಬೇಕು. ಜಿಲ್ಲಾಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಗಳಿಸುವ ಮೂಲಕ ಸಾಗರಕ್ಕೆ ಮತ್ತು ಸಂಸ್ಥೆಗೆ ಹೆಸರು ತನ್ನಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಶಿಯಾನ್ ಪಂಚಪ್ಪ, ನಮ್ಮ ಕರಾಟೆ ಸಂಸ್ಥೆ ಆರಂಭವಾಗಿ ೨೪ ವರ್ಷ ಕಳೆಯಿತು. ಸಾವಿರಾರು ವಿದ್ಯಾರ್ಥಿಗಳು ಕರಾಟೆ ಕಲಿತು ಇನ್ನೊಬ್ಬರಿಗೂ ಅದನ್ನು ಧಾರೆ ಎರೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆ ಕರಾಟೆಪಟುಗಳು ರಾಷ್ಟç, ಅಂತರಾಷ್ಟçಮಟ್ಟದಲ್ಲಿ ಸಹ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಮುಂದಿನ ವರ್ಷ ಸಂಸ್ಥೆ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದ್ದು ಈ ಸಂದರ್ಭದಲ್ಲಿ ಅಂತರಾಷ್ಟಿಯ ಮಟ್ಟದ ಕರಾಟೆ ಪಂದ್ಯಾವಳಿ ಆಯೋಜಿಸುವ ಉದ್ದೇಶವಿದೆ ಎಂದು ಹೇಳಿದರು.

ಜಿಲ್ಲಾ ಮಟ್ಟದಿಂದ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ನೇಹಾ ಖಾನ್, ಸಾಗರ್, ಸನ್ನಿಧಿ ಶಿವಮ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಾವತಿ, ಲಿಂಗರಾಜ್, ವಿನೋದ್, ಕಿರಣ್, ಗುರುರಾಜ್, ಅಮ್ರಿನ್, ಬರ್ಕತ್ ಆಲಿ, ಸುಜಾತಾ ಇನ್ನಿತರರು ಹಾಜರಿದ್ದರು.

ವರದಿ: ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ)

Edited By : PublicNext Desk
Kshetra Samachara

Kshetra Samachara

14/11/2024 10:21 pm

Cinque Terre

4.84 K

Cinque Terre

0

ಸಂಬಂಧಿತ ಸುದ್ದಿ