ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಕೋಲಾ : ಕೆಎಲ್ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನ ಆಚರಣೆ

ಅಂಕೋಲಾ : ಪ್ರೇಮಾತಾಯಿ ಪಿಕಳೆ ದಂಪತಿಗಳು ಸಂಸ್ಥೆಯನ್ನು ಕಟ್ಟಿ ಅದನ್ನು ಸಪ್ತರ್ಷಿಗಳು ಕಟ್ಟಿ ಬೆಳೆಸಿದ ಡಾ.ಪ್ರಭಾಕರ ಕೋರೆಯವರ ಸಾರಥ್ಯದ ಕೆ.ಎಲ್.ಇ. ಸಂಸ್ಥೆಗೆ ಹಸ್ತಾಂತರಿಸಿದ ನಂತರ ಸಮಾಜದ ಆಶಯಕ್ಕೆ ಚ್ಯುತಿ ಬರದಂತೆ ನಡೆಸಿ ಅಂಕೋಲಾ ಜನತೆಯ ಸೇವೆಗೆ ಇಟ್ಟಿದ್ದಾರೆ. ಕೆ.ಎಲ್.ಇ. ಎನ್ನುವದು ಕರ್ನಾಟಕದ ಶಿಕ್ಷಣದಲ್ಲಿ ತಿಲಕ ಪ್ರಾಯವಾದದ್ದು. ಅಂತಹ ದೂರದ ಕೆ.ಎಲ್.ಇ. ಸಂಸ್ಥೆ ಅಂಕೋಲಾ ಜನಸಾಮಾನ್ಯರ ಅಭಿವೃದ್ಧಿಯ ಕಂಕಣ ತೊಟ್ಟಿರುವದು ನಮ್ಮ ಭಾಗ್ಯ ಅಂತಹ ಸಂಸ್ಥೆಗೆ ಅಂಕೋಲಿಗರು ಸಹಕಾರ ನೀಡಿದಲ್ಲಿ ಅಂಕೋಲಾ ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕವಾಗಿ ವೈದ್ಯಕಿಯವಾಗಿ ವಿಜೃಂಭಿಸಲಿದೆ ಎಂದು ದಂತ ವೈದ್ಯ ಡಾ. ಕರುಣಾಕರ ನಾಯ್ಕ ಹೇಳಿದರು.

ಅವರು ಕೆ.ಎಲ್.ಇ. ಸಮೂಹ ಸಂಸ್ಥೆ ಆಯೋಜಿಸಿದ 109ನೇ ಕೆ.ಎಲ್.ಇ. ಸಂಸ್ಥಾಪನಾ ದಿನಾಚರಣೆಯಲ್ಲಿ ನಿವೃತ್ತ ಹಾಗೂ ಸಾಧಕ ಸಿಬ್ಬಂದಿಗಳನ್ನು, ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡುತ್ತಾ ಅಂಕೋಲಾಕ್ಕೆ ಕೆ.ಎಲ್.ಇ. ಮೂಲಕ ಕಬ್ಬಿನ ಸಸಿ ಬಂದಿದೆ ಅದನ್ನು ದಷ್ಟಪುಷ್ಟವಾಗಿ ಬೆಳೆಸಿದಾಗ ಮಾತ್ರ ಇನ್ನೊಂದಿಷ್ಟು ಸಿಹಿ ನೀಡಲು ಸಾಧ್ಯ. ಆ ಜವಾಬ್ದಾರಿ ಅಂಕೋಲಿಗರ ಮೇಲಿದೆ ಎಂದರು.

Edited By : PublicNext Desk
Kshetra Samachara

Kshetra Samachara

14/11/2024 06:17 pm

Cinque Terre

3.98 K

Cinque Terre

0

ಸಂಬಂಧಿತ ಸುದ್ದಿ