ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಮತದಾರರನ್ನು ಸೆಳೆಯಲು ವಿಶೇಷ ಮತಗಟ್ಟೆಗಳು

ಹಾವೇರಿ: ಶಿಗ್ಗಾವಿ ಉಪಚುನಾವಣೆಯ ಮತದಾನಕ್ಕೆ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗವು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದೆ. ಶಿಗ್ಗಾಂವ ಕ್ಷೇತ್ರದಲ್ಲಿ ಎಂಟು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಐದು ಸಖಿ ಮತಗಟ್ಟೆಗಳೂ ಸೇರಿವೆ.

ಸಖಿ ಮತಗಟ್ಟೆಯಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೇ ನೇಮಿಸಲಾಗಿದೆ.

ಇದರೊಂದಿಗೆ ಒಂದು ಯುವ ಮತಗಟ್ಟೆ, ಒಂದು ವಿಶೇಷ ಚೇತನರ ಮತಗಟ್ಟೆ, ಒಂದು ಜನಪದ ಕಲೆ ಬಿಂಬಿಸೋ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಯುವ ಮತಗಟ್ಟೆಯಲ್ಲಿ ಯುವಕರೇ ಚುನಾವಣಾ ಸಿಬ್ಬಂದಿಯಾಗಿದ್ದಾರೆ. ವಿಶೇಷ ಚೇತನರ ಮತಗಟ್ಟೆಯಲ್ಲಿ ವಿಶೇಷ ಚೇತನರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ಈ ರೀತಿ ವಿಶಿಷ್ಟ ಪ್ರಯೋಗ ಮಾಡಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಇಒ ಅಕ್ಷಯ ಶ್ರೀಧರ್, ಚುನಾವಣೆ ಮತಗಟ್ಟೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಕಳೆದ ಬಾರಿ ಮತದಾನಕ್ಕಿಂತ ಈ ಬಾರಿ ಹೆಚ್ಚಾಗುವ ಸಾಧ್ಯತೆ ಇದೆ. ಮತಗಟ್ಟೆಯತ್ತ ಮತದಾರರನ್ನ ಸೆಳೆಯಲು ಎಲ್ಲ ಸಿದ್ದತೆ ಮಾಡಲಾಗಿದೆ. ಮತದಾನ ಮಾಡುವವರಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ವಿಕಲಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

Edited By : Suman K
Kshetra Samachara

Kshetra Samachara

13/11/2024 04:52 pm

Cinque Terre

32.3 K

Cinque Terre

0